ಯಾದಗಿರಿ: ಮಾನವನ ವಿವಿಧ ರೋಗಗಳಿಗೆ ರಾಮಬಾಣವಾಗಿರುವ ಸೀತಾಫಲ ಹಣ್ಣಿಗೆ ಭಾರೀ ಬೇಡಿಕೆ ಬಂದಿದೆ.
ಹೌದು. ಈ ವರ್ಷ ಮುಂಗಾರು ಮಳೆ ಉತ್ತಮವಾಗಿದ್ದು, ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಸೀತಾಫಲ ಹಣ್ಣಿನ ಘಮ ಹೆಚ್ಚಾಗಿದೆ. ಯಾದಗಿರಿ ತಾಲೂಕಿನ ಹತ್ತಿಕುಣಿ ವಲಯದ ಕಟಗಿಶಹಾಪುರ, ಬಾಚವಾರ, ಮೋಟ್ಟಳ್ಳಿ, ಯರಗೋಳ, ಹತ್ತಿಕುಣಿ, ಬೆಳಗೇರಾ ಗ್ರಾಮಗಳ ವಿಸ್ತಾರವಾದ ಅರಣ್ಯ ಪ್ರದೇಶದಲ್ಲಿ ಸೀತಾಫಲ ಗಿಡಗಳು ಹೆಚ್ಚಾಗಿದೆ. ಯಾವುದೇ ರಾಸಾಯನಿಕ ಗೊಬ್ಬರ, ಕೀಟ ನಾಶಕಗಳ, ಬಳಸದೆ ಬೆಳೆದ ಸೀತಾಫಲಕ್ಕೆ ಔಷಧಿ ಗುಣ ಹೊಂದಿವೆ. ಹೀಗಾಗಿ ಹತ್ತಿಕುಣಿ ಅರಣ್ಯ ಪ್ರದೇಶದಲ್ಲಿ ವಾಸವಿರುವ ಜನರು ಬೆಳಗ್ಗೆ 6 ಗಂಟೆಯಿಂದಲೇ ಬುಟ್ಟಿಗಳಲ್ಲಿ ಹಣ್ಣುಗಳನ್ನು ತುಂಬಿಕೊಂಡು ಯಾದಗಿರಿ ನಗರಕ್ಕೆ ಬಂದು ಮಾರುತ್ತಿದ್ದಾರೆ. ಯಾದಗಿರಿ ಹಳೆ ಬಸ್ ನಿಲ್ದಾಣ, ಹತ್ತಿಕುಣಿ ವೃತ್ತದ ಬಳಿ ಅನೇಕರು ಬುಟ್ಟಿಯಲ್ಲಿ ಹಣ್ಣು ಮಾರುತ್ತಾರೆ. ಒಂದು ಬುಟ್ಟಿ ಹಣ್ಣುಗಳಿಗೆ 150ರೂ. ರಿಂದ 300 ರೂ. ವರೆಗೆ ಮಾರಾಟ ಮಾಡಲಾಗುತ್ತಿದೆ.
PublicNext
30/09/2020 05:33 pm