ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

25 ವರ್ಷಗಳ ಹಿಂದೆಯೇ ಭಾರತದಲ್ಲಿ ನಡೆದಿತ್ತು 'ಮನುಷ್ಯನಿಗೆ ಹಂದಿ ಹೃದಯ ಕಸಿ'

ನವದೆಹಲಿ: ಅಮೆರಿಕದಲ್ಲಿ ವ್ಯಕ್ತಿಯೊಬ್ಬರಿಗೆ ಕುಲಾಂತರಿ ತಳಿ ಹಂದಿಯ ಹೃದಯವನ್ನು ಕಸಿ ಮಾಡಿದ್ದನ್ನು ಭಾರತ ಅಷ್ಟೇ ಅಲ್ಲದೆ ಇಡೀ ವಿಶ್ವವೇ ಹೊಗಳುತ್ತಿದೆ. ಆದರೆ ಇಂತಹ ಪ್ರಯೋಗ ಭಾರತದಲ್ಲಿ 25 ವರ್ಷ ಹಿಂದೆಯೇ ನಡೆದಿತ್ತು ಎನ್ನುವ ವಿಚಾರ ಅದೆಷ್ಟೋ ಜನರಿಗೆ ಗೊತ್ತಿಲ್ಲ. ಅಷ್ಟಕ್ಕೂ ಇಂತಹ ಐತಿಹಾಸಿಕ ಸಾಧನೆ ಮಾಡಿದ ಭಾರತದ ಖ್ಯಾತ ವೈದ್ಯರೊಬ್ಬರಿಗೆ ಸಿಕ್ಕಿದ್ದು ಪ್ರಶಂಸೆ, ಪ್ರಶಸ್ತಿಯಲ್ಲ ಹೊರತಾಗಿ ಜೈಲು ಶಿಕ್ಷೆ. ಕಾರಣ ಅಂದಿನ ದಿನಗಳಲ್ಲಿ ಮನುಷ್ಯ ಅಂಗಾಂಗ ಕಸಿಗೆ ಸಂಬಂಧಿಸಿದ ಕಾನೂನುಗಳೇ ಇರಲಿಲ್ಲ. ಅದರಲ್ಲೂ ಪ್ರಾಣಿ ಅಂಗಾಂಗ ಕಸಿಯ ಬಗ್ಗೆ ಪರಿಕಲ್ಪನೆ ಇಲ್ಲದ ಕಾಲದಲ್ಲಿ ನಡೆದ ಈ ಪ್ರಯೋಗದಿಂದಾಗಿ ವೈದ್ಯರು ಜೈಲು ಶಿಕ್ಷೆಗೆ ಗುರಿಯಾಗಬೇಕಾಯಿತು.

ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟ ಭಾರತದ ಖ್ಯಾತ ವೈದ್ಯ, ಅಸ್ಸಾಂ ಮೂಲದ ಡಾ. ಧನಿ ರಾಮ್ ಬರುವಾ ಅವರು ಇಂತಹ ಮಹತ್ವದ ಸಾಧನೆ ಮಾಡಿದವರು. ಸುಮಾರು 15 ವರ್ಷಗಳ ಕಾಲ ಪ್ರಯೋಗ ನಡೆಸಿದ ಅವರು 1997ರಲ್ಲಿ ವ್ಯಕ್ತಿಯೊಬ್ಬರಿಗೆ ಹಂದಿಯ ಹೃದಯವನ್ನು ಕಸಿ ಮಾಡಿದ್ದರು. ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ರೋಗಿಯು ಒಂದು ವಾರಗಳ ಕಾಲ ಬದುಕಿದ್ದ. ಆದರೆ ದುರಾದೃಷ್ಟವಶಾತ್ ಆತ ಸೋಂಕಿನಿಂದ ಸಾವನ್ನಪ್ಪಿದ. ಇದರಿಂದಾಗಿ ವೈದ್ಯರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಯಿತು.

ಪರಿಣಾಮ 1994ರ ಅಂಗಾಂಗ ಕಸಿ ಕಾಯ್ದೆಯಡಿ ಡಾ. ಧನಿ ರಾಮ್ ಬರುವಾ ಅವರನ್ನು ಬಂಧಿಸಲಾಯಿತು. ಬಳಿಕ ಅವರು 40 ದಿನಗಳ ಕಾಲ ಸೆರೆಮನೆವಾಸ ಅನುಭವಿಸಬೇಕಾಯಿತು. ಅಷ್ಟೇ ಅಲ್ಲದೆ ವರದಿಗಳ ಪ್ರಕಾರ, ಡಾ. ಬರುವಾ ಅವರು ಜೈಲಿನಿಂದ ಹೊರಬಂದ ಬಳಿಕ 18 ತಿಂಗಳುಗಳನ್ನು ಗೃಹಬಂಧನದಲ್ಲಿ ಕಳೆದರು.

ಆದಾಗ್ಯೂ, ಡಾ. ಬರುವಾ ಅವರು ಈ ಎಲ್ಲ ಅಹಿತಕರ ಘಟನೆ, ನಿಂದೆಗಳನ್ನು ಎದುರಿಸುತ್ತಾ ತಮ್ಮ ಸಂಶೋಧನೆ, ಪ್ರಯೋಗಗಳನ್ನು ಮುಂದುವರಿಸಿದರು. ಅವರು 2008ರಲ್ಲಿ ಜನ್ಮಜಾತ ಹೃದ್ರೋಗಕ್ಕೆ "ಜೆನೆಟಿಕಲ್ ಇಂಜಿನಿಯರ್ಡ್" ಲಸಿಕೆಯನ್ನು ಅಭಿವೃದ್ಧಿಪಡಿಸಿದರು. 2015ರಲ್ಲಿ ಎಚ್‌ಐವಿ/ ಏಡ್ಸ್‌ಗೆ ಚಿಕಿತ್ಸೆಯನ್ನು ಕಂಡುಹಿಡಿದಿದ್ದಾರೆ. ಕಳೆದ 7-8 ವರ್ಷಗಳಲ್ಲಿ ಅವರು 86 ಜನರನ್ನು ಗುಣಪಡಿಸಿದ್ದಾರೆ.

Edited By : Shivu K
PublicNext

PublicNext

12/01/2022 02:34 pm

Cinque Terre

139.76 K

Cinque Terre

6