ಬಾಗಲಕೋಟೆ: ನಾಡಿನ ಶಕ್ತಿಪೀಠ ಐತಿಹಾಸಿಕ ಬಾದಾಮಿಯ ಬನಶಂಕರಿ ದೇವಿಗೆ ಇಂದು ವಿಶೇಷವಾಗಿಯೇ ತರಕಾರಿಯಿಂದಲೇ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಲಾಗಿದೆ.
ವೀಕೆಂಡ್ ಕರ್ಫ್ಯೂ ಇರೋದ್ರಿಂದ ಅರ್ಚಕರು ಮಾತ್ರ ಇಲ್ಲಿ ಇಂದು ಧಾರ್ಮಿಕ ಪೂಜಾ ಕೈಂಕರ್ಯಗಳನ್ನ ನೆರವೇರಿಸಿದ್ದಾರೆ. 108 ತರಕಾರಿಗಳಿಂದಲೇ ತಾಯಿ ಬನಶಂಕರಿದೇವಿಗೆ ವಿಶೇಷ ಅಲಂಕಾರ ಮಾಡಲಾಗಿದೆ.
ನಾಳೆ ನಡೆಯಬೇಕಿದ್ದ ಬನಶಂಕರಿ ಜಾತ್ರಾಮಹೋತ್ಸವಕ್ಕೂ ಈಗ ಬ್ರೇಕ್ ಬಿದ್ದಿದೆ.
PublicNext
16/01/2022 03:23 pm