ಬೆಂಗಳೂರು: ಡೆಡ್ಲಿ ಸೋಂಕು ಕೊರೊನಾ ಹತೋಟಿಗೆ ಸರ್ಕಾರ ಹೊಸ ಅಸ್ತ್ರವೊಂದನ್ನಾ ಪ್ರಯೋಗಿಸಿದ್ದು ಜನಸಾಮಾನ್ಯರು ತತ್ತರಿಸಿ ಹೋಗುತ್ತಿದ್ದಾರೆ.
ಸದ್ಯ ಸಿಲಿಕಾನ್ ಸಿಟಿಯಲ್ಲಿ ಬಿಬಿಎಂಪಿ ಮಾಸ್ಕ್ ಹಾಕದವರಿಗೆ 1 ಸಾವಿರ ರೂಪಾಯಿ ದಂಡ ಹಾಕುತ್ತಿದೆ.
1 ಸಾವಿರ ದಂಡ ಹಾಕೋ ಬಗ್ಗೆ ತಜ್ಞರು ಸಹ ಬೇಸರ ವ್ಯಕ್ತಪಡಿಸಿದ್ದಾರೆ. ಹೌದು ಕೊರೊನಾ ಸಂಕಷ್ಟಕ್ಕೆ ಸಿಲುಕಿದ ಜನ ಈಗಷ್ಟೆ ಸುಧಾರಿಸಿಕೊಳ್ಳುತ್ತಿದ್ದಾರೆ.
ಇಂತಹ ಸಮಯದಲ್ಲಿ 1000 ರೂ ದಂಡ ವಸೂಲಿ ಮಾಡುತ್ತಿದೆ. ಹೀಗಾಗಿ ಮಾಸ್ಕ್ ಹಾಕದವರ ಬಳಿ 1 ಸಾವಿರ ರೂಪಾಯಿ ದಂಡ ವಸೂಲಿ ಮಾಡಿ ಜೊತೆಗೆ ಮಾಸ್ಕ್ ನೀಡಿ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಬರೀ ದಂಡ ಹಾಕೋದ್ರಿಂದ ಜನಸಾಮಾನ್ಯರಿಗೆ ಅನಾನುಕೂಲವಾಗಲಿದೆ ಮಾಸ್ಕ್ ಕೊಟ್ಟು ದಂಡ ಹಾಕುವುದು ಒಂದು ಕಡೆ ಜಾಗೃತಿ ಮೂಡಿಸಿದಂತೆ ಎಂದು ತಜ್ಞರು ಸಲಹೆ ನೀಡಿದ್ದಾರೆ.
ಇಲ್ಲಿಯ ವರೆಗೆ ವಸೂಲಿಯಾಗಿರುವ ದಂಡವೆಷ್ಟು ಗೊತ್ತಾ?
ಅಕ್ಟೋಬರ್ 2 ರಿಂದ ಒಂದು ಸಾವಿರ ರೂಪಾಯಿ ದಂಡ ಜಾರಿಯಾಗಿದೆ. ಜಾರಿಯಾದ ಮೊದಲ ದಿನವೇ 5,65,200 ದಂಡ ವಸೂಲಿಯಾಗಿದೆ.
ಅ.3 ರಂದು 403,767
ಅ.4 ರಂದು 4,36,067
ಅ.5 ರಂದು 4,78,000
ಅ.6 ರಂದು 5,50,000.
ಕಳೆದ ಐದು ದಿನದಲ್ಲಿ 24,33,034 ರೂಪಾಯಿ ಸಂಗ್ರಹವಾಗಿದೆ.
ಜೂನ್ 6 ರಿಂದ ನಿನ್ನೆ ವರೆಗೂ ಒಟ್ಟು 2,97,14,055 ರೂಪಾಯಿ ದಂಡ ವಸೂಲಿಯಾಗಿದೆ.
ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದ ಜನರಿಂದ ಬರೋಬ್ಬರಿ 2 ಕೋಟಿ 97 ಲಕ್ಷ ದಂಡ ವಸೂಲಿಯಾಗಿದೆ.
PublicNext
07/10/2020 01:08 pm