ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸೊಂಟದ ಬೊಜ್ಜು ಕರಗಿಸುವ ಹೀಗೆ ಮಾಡಿ

ದಿನಕ್ಕೊಂದು ಮೊಟ್ಟೆ : ವೈದ್ಯರೆ ಹೇಳುವ ಪ್ರಕಾರ ಬೇಯಿಸಿದ ಮೊಟ್ಟೆಯು ಬೇರೆಲ್ಲ ಕ್ಕಿಂತಲೂ ಆರೋಗ್ಯಕ್ಕೆ ಬಹಳ ಒಳ್ಳೆಯದು. ಪ್ರಮುಖವಾಗಿ ಬೇಯಿಸಿದ ಮೊಟ್ಟೆಯಲ್ಲಿ ಕಡಿಮೆ ಪ್ರಮಾಣದಲ್ಲಿ ಕ್ಯಾಲೋರಿ ಅಂಶಗಳು ಸಿಗುವುದರ ಜೊತೆಗೆ ಅತ್ಯಧಿಕ ಪೋಷಕಾಂಶಗಳು, ಪ್ರೋಟೀನ್ ಅಂಶಗಳು ಅಧಿಕ ಪ್ರಮಾಣದಲ್ಲಿ ಕಂಡು ಬರುತ್ತದೆ. ಇವು ದೇಹದ ತೂಕ ಇಳಿಸಲು ನೆರವಾಗುವುದು ಮಾತ್ರವಲ್ಲದೆ, ಬೊಜ್ಜಿನ ಸಮಸ್ಯೆಯನ್ನು ಕೂಡ ದೂರ ಮಾಡುವುದು.

ಡ್ರೈಫ್ರೂಟ್ಸ್ ಗಳು

ಕೆಲವೊಂದು ಡ್ರೈಫ್ರೂಟ್ಸ್ ಗಳಾದ ನೆನೆಸಿಟ್ಟ ಬಾದಾಮಿ, ವಾಲ್ನಟ್, ಗೋಡಂಬಿ ಬೀಜಗಳನ್ನು ತಿನ್ನವ ಅಭ್ಯಾಸ ಇಟ್ಟುಕೊಂಡರೆ ಬಹಳ ಒಳ್ಳೆಯದು. ಇದರಿಂದ ಆರೋಗ್ಯ ವೃದ್ಧಿಯಾಗುವುದು ಮಾತ್ರ ವಲ್ಲದೆ ದೇಹದ ತೂಕ ನಿಯಂತ್ರಣಕ್ಕೆ ಬಂದು, ಸೊಂಟದ ಸುತ್ತಲಿನ ಬೊಜ್ಜಿನ ಸಮಸ್ಯೆ ನಿಯಂತ್ರ ಣಕ್ಕೆ ಬರಲು ನೆರವಾಗುತ್ತದೆ.

ಮೊಸರು

ಹಾಲಿನ ಉತ್ಪನ್ನವಾದ ಮೊಸರು ಆರೋಗ್ಯಕ್ಕೆ ಬಹಳ ಒಳ್ಳೆಯದು. ಕ್ಯಾಲ್ಸಿಯಂ, ವಿಟಮಿನ್, ಕ್ಯಾಲೋರಿ, ಪ್ರೋಟೀನ್ ಅಂಶಗಳು ಕೂಡ ಮೊಸರಿನಲ್ಲಿ ಯಥೇಚ್ಛವಾಗಿ ಸಿಗುತ್ತವೆ.

ಬ್ರೊಕೋಲಿ

ಹಸಿರೆಲೆ ತರಕಾರಿಗಳು, ಸೊಪ್ಪುಗಳು ನಮ್ಮ ಆರೋಗ್ಯಕ್ಕೆ ಒಳ್ಳೆಯದು. ವಿಟಮಿನ್ ಸಿ, ವಿಟಮಿನ್ ಕೆ, ನಾರಿನಾಂಶ, ಪ್ರಮುಖವಾಗಿ ಅಧಿಕ ಪ್ರಮಾಣದಲ್ಲಿ ಪ್ರೋಟೀನ್ ಅಂಶಗಳ ಜೊತೆಗೆ ಕಡಿಮೆ ಪ್ರಮಾಣದಲ್ಲಿ ಕ್ಯಾಲೋರಿ ಅಂಶಗಳು ಕೂಡ ಈ ತರಕಾರಿಯಲ್ಲಿ ಸಿಗುವುದರಿಂದ, ದೇಹದ ತೂಕ ಇಳಿಸುವುದರ ಜೊತೆಗೆ ಬೊಜ್ಜಿನ ಸಮಸ್ಯೆಯನ್ನು ಕೂಡ ದೂರ ಮಾಡುತ್ತದೆ.

ಅಗಸೆ ಬೀಜಗಳು

ಫ್ಲಾಕ್ಸ್ ಸೀಡ್ಸ್ ಗಳಲ್ಲಿ ಪೌಷ್ಟಿಕಾಂಶಗಳ ಪ್ರಮಾಣ ಅಧಿಕ ಪ್ರಮಾಣದಲ್ಲಿ ಕಂಡುಬರುವುದರಿಂದ, ಇದೊಂದು ಆರೋಗ್ಯಕಾರಿ ಬೀಜ ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ಬೀಜಗಳಲ್ಲಿ ಒಮೆಗಾ 3 ಫ್ಯಾಟಿ ಆಮ್ಲಗಳು, ಅಧಿಕ ಪ್ರಮಾಣದಲ್ಲಿ ಪ್ರೋಟೀನ್ ಅಂಶಗಳು, ನಾರಿನ ಅಂಶ ಹೀಗೆ ಹಲವಾರು ದೇಹಕ್ಕೆ ಅಗತ್ಯವಾದ ಪೌಷ್ಟಿಕ ಸತ್ವಗಳು ಅದರಲ್ಲಿ ಸಿಗುತ್ತವೆ.

ಗ್ರೀನ್ ಟೀ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ

ಗ್ರೀನ್ ಟೀಯಲ್ಲಿ ಹಲವಾರು ರೀತಿಯ ಔಷಧೀಯ ಗುಣಗಳು ಹಾಗೂ ಪೋಷಕಾಂಶಗಳು ಕಂಡು ಬರುವುದರಿಂದ ಇಂದಿನ ದಿನಗಳಲ್ಲಿ ಇದಕ್ಕೆ ಎಲ್ಲಿಲ್ಲದ ಬೇಡಿಕೆ ಶುರುವಾಗಿದೆ.ಪ್ರತಿದಿನ ಈ ಗ್ರೀನ್ ಟೀ ಕುಡಿಯುವ ಅಭ್ಯಾಸ ಮಾಡಿಕೊಂಡರೆ, ದೇಹದ ತೂಕ ಕಡಿಮೆಯಾಗುತ್ತದೆ.

Edited By : Nirmala Aralikatti
PublicNext

PublicNext

28/09/2022 06:19 pm

Cinque Terre

34.58 K

Cinque Terre

0

ಸಂಬಂಧಿತ ಸುದ್ದಿ