ಮಥುರಾ: ನಿನ್ನೆ ಶುಕ್ರವಾರ ದೇಶಾದ್ಯಂತ ಶ್ರೀ ಕೃಷ್ಣ ಜನ್ಮಾಷ್ಟಮಿ ಸಂಭ್ರಮ. ಉತ್ತರ ಪ್ರದೇಶದ ಮಥುರಾ ಶ್ರೀಕೃಷ್ಣ ಮಂದಿರಕ್ಕೆ ಲಕ್ಷಾಂತರ ಭಕ್ತರು ದರ್ಕಶನಕ್ಕಾಗಿ ಆಗಮಿಸಿದ್ದಾರೆ. ಆದ್ರೆ ದರ್ಶನಕ್ಕಾಗಿ ಭಾರಿ ಜನಜಂಗುಳಿ ಒಂದೇ ಕಡೆ ಸೇರಿದ ಕಾರಣ ದೇವಸ್ಥಾನದಲ್ಲಿ ಭಕ್ತರಿಗೆ ಉಸಿರಾಟದ ತೊಂದರೆ ಉಂಟಾಗಿದೆ.
ಪರಿಸ್ಥಿತಿ ಅರಿತ ಪೊಲೀಸರು ದೇಹ ನಿತ್ರಾಣಗೊಂಡಿದ್ದ ಕೆಲವರನ್ನು ಕೂಡಲೇ ಹೊರತಂದಿದ್ದಾರೆ. ಹಾಗೂ ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ಕೊಡಿಸಿ ಉಪಚರಿಸಿದ್ದಾರೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಮಥುರಾ ಎಸ್‌ಪಿ ಹಾಗೂ ಜಿಲ್ಲಾಧಿಕಾರಿ ಮಧ್ಯರಾತ್ರಿ ವರೆಗೂ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಈ ವೇಳೆ ಉಸಿರಾಟದ ತೊಂದರೆ ಆಗಿದೆ. ಅಲ್ಲಿ ಹೊರಗೆ ತೆರಳುವ ಎರಡೇ ಬಾಗಿಲುಗಳು ಇದ್ದಿದ್ದರಿಂದ ಈ ಸಮಸ್ಯೆ ಉಂಟಾಗಿದೆ. ನಿತ್ರಾಣಗೊಂಡ ಕೆಲವರನ್ನು ಕೂಡಲೇ ಹೊರತರಲಾಗಿದೆ. ಈ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ ಎಂದು ತಿಳಿಸಿದ್ದಾರೆ.
PublicNext
20/08/2022 05:20 pm