ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಡೋಲೋ ಕಂಪನಿ ಹಗರಣ : ಕೇಂದ್ರ ಸರ್ಕಾರಕ್ಕೆ ಸುಪ್ರೀಂ ನೋಟಿಸ್

ನವದೆಹಲಿ : ಕೋವಿಡ್ ಟೈಮ್ ನಲ್ಲಿ ಡೋಲೋ 650 ಮಾತ್ರೆಗಳು ಮನೆಮಾತಾಗಿದ್ದವು. ಆದರೆ ಡೋಲೋ ಕಂಪನಿ ದೊಡ್ಡ ಭ್ರಷ್ಟಾಚಾರ ನಡೆಸಿದ ಆರೋಪ ಕೇಳಿ ಬಂದಿದೆ. ವೈದ್ಯರನ್ನ ಭ್ರಷ್ಟರನ್ನಾಗಿ ಮಾಡಿ ಡೋಲೋ ಕಂಪನಿ ಹಗರಣ ನಡೆಸಿದೆ ಎಂಬ ಆರೋಪ ಕೇಳಿ ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನಲ್ಲಿ ಪಿಐಎಲ್ ಸಲ್ಲಿಕೆಯಾಗಿದೆ.

ಕೋವಿಡ್ ಜ್ವರಕ್ಕೆ ಡೋಲೋ 650 ಮಾತ್ರೆ ಬರೆಯಲು ಡೋಲೋ ಕಂಪನಿ ದೇಶದ ವೈದ್ಯರಿಗೆಲ್ಲ ಒಂದು ಸಾವಿರ ಕೋಟಿ ರೂಪಾಯಿ ನಷ್ಟು ಉಚಿತ ಸೌಲಭ್ಯಗಳ ಲಂಚ ಕೊಟ್ಟಿದೆ ಎಂದು ಔಷಧಿ ಮಾರಾಟ ಪ್ರತಿನಿಧಿಗಳ ಸಂಘವು ಸುಪ್ರೀಂಕೋರ್ಟ್ ನಲ್ಲಿ ನಿನ್ನೆ ಗುರುವಾರ ಪಿಐಎಲ್ ಅರ್ಜಿ ಸಲ್ಲಿಸಿದೆ.

ಭಾರತದಲ್ಲಿ ಮಾರುವ ಔಷಧಿಗಳ ಸೂತ್ರೀಕರಣ ಮತ್ತು ಬೆಲೆಗಳ ನಿಯಂತ್ರಣದ ಬಗ್ಗೆ ಪಿಐಎಲ್ ನಲ್ಲಿ ಕಳವಳ ವ್ಯಕ್ತಪಡಿಸಿದೆ. ಹಿರಿಯ ನ್ಯಾಯವಾದಿ ಸಂಜಯ್ ಪಾರಿಖ್, ಸುಪ್ರೀಂ ಕೋರ್ಟ್ನಲ್ಲಿ ಔಷಧಿ ಮಾರಾಟ ಪ್ರತಿನಿಧಿಗಳ ಸಂಘದ ಪರ ವಾದಿಸಿದಾರೆ. ಯಮೂರ್ತಿಗಳಾದ ಡಿವೈ ಚಂದ್ರಚೂಡ್ ಮತ್ತು ಎ ಎಸ್ ಬೋಪಣ್ಣ ಅವರಿದ್ದ ದ್ವಿಸದಸ್ಯ ಪೀಠವು, ಸಂಜಯ್ ಪಾರಿಖ್ ರ ಅಹವಾಲುಗಳನ್ನು ಆಲಿಸಿ, ಇದು ಗಂಭೀರ ಸಮಸ್ಯೆ ಎಂದು ಅಭಿಪ್ರಾಯಪಟ್ಟಿದೆ. ಪಿಐಎಲ್ ಗೆ ಸಂಬಂಧಿಸಿ 1 ವಾರದೊಳಗೆ ತನ್ನ ಪ್ರತಿಕ್ರಿಯೆಗಳನ್ನ ಸಲ್ಲಿಸಲು ಕೇಂದ್ರಕ್ಕೆ ನೋಟಿಸ್ ಜಾರಿ ಮಾಡಿದೆ. ಅಲ್ಲದೇ 10 ದಿನದ ಬಳಿಕ ಮತ್ತೆ ವಿಚಾರಣೆ ಕೈಗೆತ್ತಿಕೊಳ್ಳೋದಾಗಿ ಕೋರ್ಟ್ ಹೇಳಿದೆ.

Edited By : Nirmala Aralikatti
PublicNext

PublicNext

20/08/2022 10:22 am

Cinque Terre

99.13 K

Cinque Terre

5