ಬಾಗಲಕೋಟೆ: ಬಾದಾಮಿಯ ಪ್ರತಿಷ್ಠಿತ ಬನಶಂಕರಿ ದೇವಸ್ಥಾನದ ಜಾತ್ರೆ ಕೋವಿಡ್ ನಿಷೇಧ ಮಧ್ಯೆನೂ ನಡೆದಿದೆ. ಜಾತ್ರೆಯಲ್ಲಿ ಕೋವಿಡ್ ನಿಯಮ ಗಾಳಿಗೆ ತೂರಿದ ಜನ ಸಾಗರೋಪಾದಿಯಲ್ಲಿ ಹರಿದು ಬಂದಿದ್ದಾರೆ. ಜನರನ್ನ ನಿಯಂತ್ರಿಸಲಾಗದೇ ಪೊಲೀಸರು ಅಸಹಾಯಕರಾಗಿಯೇ ಇಲ್ಲಿ ನಿಂತು ಬಿಟ್ಟಿದ್ದರು.
ಕೋವಿಡ್ ಇರೋ ಕಾರಣ ಬನಶಂಕರಿ ಜಾತ್ರೆ ಆಚರಿಸಲು ನಿರ್ಬಂಧ ಹೇರಲಾಗಿತ್ತು. ಆದರೂ, ದೇವಸ್ಥಾನದ ಆಡಳಿತ ಮಂಡಲಿ ಸಾಂಕೇತಿಕವಾಗಿ ರಥೋತ್ಸವ ಆಚರಿಸಲು ನಿರ್ಧರಿಸಿತ್ತು.ಆದರೆ ರಥೋತ್ಸವ ಪ್ರತಿವರ್ಷದಂತೆ ಇಲ್ಲಿ ಅದ್ದೂರಿಯಾಗಿಯೇ ಇಲ್ಲಿ ನಡೆದಿದೆ.
ಭಕ್ತರು ಇಲ್ಲಿ ಮಾಸ್ಕ್ ಇಲ್ಲದೇ ಸಾಮಾಜಿ ಅಂತರವೂ ಇಲ್ಲದೆ ಎಲ್ಲವನ್ನೂ ಗಾಳಿಗೆ ತೂರಿ ಜಾತ್ರೆಯಲ್ಲಿ ಭಾಗಿ ಆಗಿದ್ದಾರೆ.ಗದಗ ಜಿಲ್ಲೆ ಮಾಡಲಗೇರಿಯಿಂದ ಬಂದಿದ್ದ ಭಕ್ತರಂತೂ ತೇರಿನ ಬಳಿ ನುಗ್ಗಿ ಬಂದಿದ್ದರು. ಇವರನ್ನ ಹೊರಗೆ ಕಳಿಸಲು ಪೊಲೀಸರು ಹರಸಾಹಸಪಟ್ಟರು. ಒಟ್ಟಾರೆ ಹಂಗೋ ಇಂಗೋ ನಿಷೇಧದ ಮಧ್ಯೆ ಜಾತ್ರೆ ಎಂದಿನಂತೆ ಅದ್ದೂರಿಯಾಗಿಯೇ ನಡೆದು ಹೋಗಿದೆ.
PublicNext
18/01/2022 09:52 am