ಬೆಂಗಳೂರು : ರಾಜ್ಯದಲ್ಲಿ ಸದ್ಯಕ್ಕೆ ಶಾಲೆಗಳನ್ನು ಆರಂಭಿಸುವುದಿಲ್ಲಎಂದು ಹೇಳಿದ್ದ ರಾಜ್ಯ ಸರ್ಕಾರ ಸ್ತಬ್ಧವಾಗಿಯೇ ಶಾಲೆ ಆರಂಭಕ್ಕೆ ಅಗತ್ಯ ಮಾರ್ಗಸೂಚಿ ರೆಡಿ ಮಾಡಿದೆ ಎಂದು ಬಲ್ಲ ವರದಿಗಳಿಂದ ತಿಳಿದಿದೆ.
ನಿನ್ನೆಯಷ್ಟೇ ಹೇಳಿಕೆ ನೀಡಿದ್ದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಶಾಲೆ ಪುನರ್ ಆರಂಭಿಸಲು ಸರ್ಕಾರ ಯಾವುದೇ ದಿನ ನಿಗದಿ ಮಾಡಿಲ್ಲ ಎಂದಿದ್ದರು ಆದರೆ, ಇಲಾಖೆಯ ಕೆಲ ಅಧಿಕಾರಿಗಳು ಈಗಾಗಲೇ ಶಾಲೆಗಳನ್ನು ಪುನರಾರಂಭಿಸಲು ಅಗತ್ಯ ಮಾರ್ಗಸೂಚಿಗಳನ್ನು ತಯಾರಿಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
2020-21ನೇ ಸಾಲಿನ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯು ಮಾರ್ಗ ಸೂಚಿಯಲ್ಲಿ ಶಾಲೆಯಲ್ಲಿ ಪ್ರಥಮವಾಗಿ ಸ್ವಚ್ಛತೆ, ಶೈಕ್ಷಣಿಕ ವೇಳಾಪಟ್ಟಿ, ಮಕ್ಕಳನ್ನು ಯಾವ ರೀತಿ ಜಾಗೃತಿ ವಹಿಸಬೇಕು, ಕೊರೋನಾ ಮುಂಜಾಗ್ರತಾ ಕ್ರಮಗಳೇನು ? ಸಮುದಾಯವನ್ನು ಒಳಗೊಂಡ ನಿಯಮಗಳೇನು ? ಎಂಬ ಅಂಶ ತಿಳಿದು ಬರುತ್ತಿದೆ.
* ಮಗು ಶಾಲೆಯಲ್ಲಿ ಸೋಂಕಿನಿಂದ ರಕ್ಷಿಸಿಕೊಳ್ಳುವ ಮಾರ್ಗವನ್ನ ಪಾಲಕ ಪೋಷಕರೇ ಕೈಗೊಳ್ಳಬೇಕು.
* ಮಗುವಿನ ಮನೆಯಲ್ಲಿ ಯಾರಿಗಾದ್ರೂ ಕೊರೋನಾ ಸೋಂಕಿದ್ದರೆ ಮಕ್ಕಳನ್ನು ಶಾಲೆಗೆ ಕಳುಹಿಸುವಂತಿಲ್ಲ.
* ಮಕ್ಕಳಿಗೆ ಮಾಸ್ಕ್ ಎರಡು ಮಾಸ್ಕ್ ನೀಡಬೇಕು. ಈ ಜವಾಬ್ದಾರಿಯನ್ನ ಹೊಣೆಯನ್ನು ಪೋಷಕರೇ ನಿಭಾಯಿಸಬೇಕು.
* ಮಕ್ಕಳ ಪುಸ್ತಕಗಳ ಕೈ ಚೀಲದಲ್ಲಿ ಜೊತೆಗೆ ಮತ್ತೊಂದು ಚೀಲದಲ್ಲಿ ಒಂದು ತಟ್ಟೆ, ನ್ಯಾಪ್'ಕಿನ್ ಅಥವಾ ಟವಲ್, ವಾಟರ್ ಬಾಟಲ್ ಮತ್ತು ಸ್ಯಾನಿಟೈಜರ್ ಬಾಟಲ್ ಇರಲೇಬೇಕು.
* ಇನ್ನು ಶಾಲೆಯ ಆಡಳಿತ ಮಂಡಳಿಗಳು ಶಾಲೆ ಆರಂಭದ ಮೊದಲು ಇಡೀ ಶಾಲೆಯನ್ನು ಸ್ವಚ್ಛಗೊಳಿಸಬೇಕು.
* ಪ್ರತಿ ಕೊಠಡಿ, ಪ್ರಯೋಗಾಲಯ, ಪೀಠೋಪಕರಣಗಳು, ಕಿಟಕಿ, ಬಾಗಿಲುಗಳನ್ನು ಸೋಂಕು ನಿವಾರಕದಿಂದ ಸ್ವಚ್ಚವಾಗಿ ಇರಿಸಬೇಕು.
* ಮಧ್ಯಾಹ್ನ ವೇಳೆ ಬಿಸಿಯೂಟ ಮಾಡುಲು ಉಪಯೋಗಿಸುವ ಪಾತ್ರೆ, ಆಹಾರ ಧಾನ್ಯದ ಡಬ್ಬಿಗಳನ್ನು ದಿನವು ತೊಳಯುವಂತೆ ಮಾರ್ಗಸೂಚಿಯಲ್ಲಿ ಹೇಳಲಾಗಿದಯಂತೆ.
PublicNext
30/09/2020 02:57 pm