ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾದಾಮಿಯ ಬನಶಂಕರಿ ಜಾತ್ರೋತ್ಸವಕ್ಕೆ ಕೊರೋನಾ ಕರಿನೆರಳು

ಬಾಗಲಕೋಟೆ: ರಾಜ್ಯದಲ್ಲಿ ಕೊರೋನಾ ಹಾವಳಿ ಹಿನ್ನೆಲೆಯಲ್ಲಿ ನಾಡಿನ ಶಕ್ತಿಪೀಠ ಐತಿಹಾಸಿಕ ಬಾದಾಮಿಯ ಬನಶಂಕರಿ ಜಾತ್ರೆಯನ್ನು ರದ್ದು ಮಾಡಲಾಗಿದೆ. ಇಂದು ಸಂಜೆ ಜಾತ್ರೆ ನಿಮಿತ್ಯ ಮಹಾ ರಥೋತ್ಸವ ನಡೆಯಬೇಕಿತ್ತು ಆದರೆ ಜಾತ್ರೆ ನಿಷೇಧಿಸಿ ಜಿಲ್ಲಾಡಳಿತ ಆದೇಶ ನೀಡಿದೆ.

ಜಾತ್ರೆ ರದ್ದು ಪಡಿಸಿದ್ರು ದೇವಿಯ ದರ್ಶನಕ್ಕೆ ಪಾದಯಾತ್ರಾರ್ಥಿಗಳು ಬರುತ್ತಲೇ ಇದ್ದಾರೆ.ಪ್ರತಿವಷ೯ ಲಕ್ಷಾಂತರ ಜನರ ಮಧ್ಯೆ ಬನದ ಹುಣ್ಣಿಮೆ ದಿನ ಅದ್ದೂರಿಯಾಗಿ ನಡೆಯುತ್ತಿದ್ದ ಈ ಹಬ್ಬಕ್ಕೆ

ರಾಜ್ಯ ಹೊರರಾಜ್ಯದ ಭಕ್ತರು ಬರುತ್ತಿದ್ದರು‌‌. ಒಂದು ತಿಂಗಳಪಯ೯ಂತರ ಹಗಲು ರಾತ್ರಿ ನಡೆಯುತ್ತಿದ್ದ ಈ ಜಾತ್ರೋತ್ಸವ ಈ ಬಾರಿ ರದ್ದಾಗಿದೆ.

Edited By : Shivu K
PublicNext

PublicNext

17/01/2022 10:35 am

Cinque Terre

136.19 K

Cinque Terre

3

ಸಂಬಂಧಿತ ಸುದ್ದಿ