ಬೆಂಗಳೂರು : ನಗರದಾದ್ಯಂತ ವೀಕೆಂಡ್ ಕರ್ಫ್ಯೂ ರೂಲ್ಸ್ ಬ್ರೇಕ್ ಮಾಡಿದ ವಾಹನ ಸವಾರರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಸುಖಾಸುಮ್ಮನೆ ಹೊರಗೆ ಬಂದ ವಾಹನಗಳನ್ನು ಸೀಜ್ ಮಾಡಿ ಕೇಸ್ ಬುಕ್ ಮಾಡಿದ್ದಾರೆ.
ಇಂದು ಬೆಳಿಗ್ಗೆ 6-10 ಕ್ಕೆ ಸುಮಾರು 200ವಾಹನಗಳನ್ನು ನಗರ ಪೊಲೀಸರು ಸೀಜ್ ಮಾಡಿದ್ದಾರೆ. ಪಶ್ಚಿಮ ವಿಭಾಗದ 103 ಟೂ ವೀಲರ್ 10 ಆಟೋ 08 ಕಾರುಗಳು ಸೇರಿ 131 ವಾಹನಗಳು ಸೀಜ್ ಆಗಿದ್ರೆ ಉತ್ತರ ವಿಭಾಗದಲ್ಲಿ 17 ಟೂ ವೀಲರ್ ಸೀಜ್ ಮಾಡಿ ಕೇಸ್ ಬುಕ್ ಮಾಡಿದ್ದಾರೆ.
ಇನ್ನು ರಸ್ತೆಗೆ ಬರುವವರೆಲ್ಲ ಒಂದೊಂದು ಕಾರಣ ಹೇಳೋದನ್ನ ಕೇಳಿ ಸುಸ್ತಾದ ಪೊಲೀಸರು ವಾಹನ್ ಸೀಜ್ ಮಾಡಲು ಮುಂದಾಗಿದ್ದು ಸಂಜೆ ವೇಳೆಗೆ ಈ ವೆಹಿಕಲ್ ಸೀಜ್ ನ ಸಂಖ್ಯೆ ದುಪ್ಪಟ್ಟಾಗೋ ಸಾಧ್ಯತೆಯಿದೆ.
PublicNext
15/01/2022 11:59 am