ವಿಜಯಪುರ: ರಾಜ್ಯಾದ್ಯಂತ ವೀಕೆಂಡ್ ಕರ್ಫ್ಯೂ ಜಾರಿ ಆಗಿದೆ. ಆದರೆ ವಿಜಯಪುರದಲ್ಲಿ ಜನ ವಿನಾಕಾರಣವೇ ರಸ್ತೆಯಲ್ಲಿ ಓಡಾಡ್ತಿದ್ದಾರೆ. ಅದಕ್ಕೇನೆ ಪೊಲೀಸರು ಬೆಳ್ಳಂಬೆಳಗ್ಗೇನೆ ಅಂತವರಿಗೆ ಲಾಠಿ ರುಚಿ ತೋರಿಸಿದ್ದಾರೆ.
ಕೋವಿಡ್ ನಿಯಂತ್ರಣಕ್ಕೇನೆ ಈ ವೀಕೆಂಡ್ ಕರ್ಫ್ಯೂ ಜಾರಿ ಆಗಿದೆ. ಆದರೂ ಜನ ಬೇಕಾಬಿಟ್ಟಿ ಓಡಾಡ್ತಿದ್ದಾರೆ. ಇಲ್ಲಿಯ ಗಾಂಧಿ ಚೌಕ್ ಮಾರುಕಟ್ಟೆಯ ಸಂದಿಯಲ್ಲಿ ನಿಯಮ ಮೀರಿ ಟೀ ಮಾರುತ್ತಿದ್ದ ವ್ಯಕ್ತಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ.
ವೀಕೆಂಡ್ ಕರ್ಫ್ಯೂ ಇದ್ದರೂ ಸಹ ಇಲ್ಲಿ ಜನ ಗುಂಪಾಗಿ ನಿಂತಿದ್ದರು. ಹಾಗಾಗಿಯೇ ಅವರಿಗೂ ಪೊಲೀಸರು ಲಾಠಿ ಬಿಸಿ ಮುಟ್ಟಿಸಿದ್ದಾರೆ.
PublicNext
08/01/2022 09:07 am