ಬೆಳಗಾವಿ : ನೆರೆ ರಾಜ್ಯಗಳಲ್ಲಿ ಡೆಲ್ಟಾ ಪ್ಲಸ್ ವೈರಾನೂ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ 8 ಗಡಿಜಿಲ್ಲೆಗಳಲ್ಲಿ ವೀಕೆಂಡ್ ಲಾಕ್ ಡೌನ್ ಜಾರಿ ಮಾಡಲಾಗಿದೆ.
ಸದ್ಯ ಗಡಿಜಿಲ್ಲೆ ಬೆಳಗಾವಿಯಲ್ಲೂ ವೀಕೆಂಡ್ ಲಾಕ್ ಡೌನ್ ಜಾರಿ ಹಿನ್ನೆಲೆಯಲ್ಲಿ ಅಗತ್ಯ ವಸ್ತು ಖರೀದಿ ಅಂಗಡಿ ಹೊರತುಪಡಿಸಿ ಅಂಗಡಿ ಮುಂಗಟ್ಟುಗಳು ಬಂದ್ ಆಗಿವೆ.
ನಗರದ ಪ್ರಮುಖ ಬೀದಿಗಳಲ್ಲಿ ಬ್ಯಾರಿಕೆಡ್ ಇಟ್ಟು ಮಾರ್ಕೆಟ್ ಪ್ರದೇಶ ಸಂಪರ್ಕ್ ಬಂದ್ ಮಾಡಿರೋ ಪೋಲೀಸರು ಬೇಕಾಬಿಟ್ಟಿ ಓಡಾಡ್ತೀರೋ ವಾಹನ ಸವಾರರಿಗೆ ಬಿಸಿ ಮುಟ್ಟಿಸುತ್ತಿದ್ದಾರೆ.
ಇನ್ನು ಸಾಮಾಜಿಕ ಅಂತರ ಮರೆತು ತರಕಾರಿ ಅಗತ್ಯ ವಸ್ತು ಕೊಳ್ಳಲು ಜನ ಮುಗಿಬಿದ್ದಿರುವ ದೃಶ್ಯಗಳು ಎಲ್ಲೇಡೆ ಸಾಮಾನ್ಯವಾಗಿವೆ. ನಗರದ ಗಣಪತಿಗಲ್ಲಿ, ಮಾರುತಿಗಲ್ಲಿ, ಖಡೆಬಜಾರ್ ಸೇರಿದಂತೆ ನಗರದಲ್ಲಿ ವೀಕೆಂಡ್ ಲಾಕ್ ಡೌನ್ ಗೊಚರಿಸುತ್ತಿದೆ. ಶುಕ್ರವಾರ ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಿಗ್ಗೆ 5 ಗಂಟೆವರೆಗೂ ಈ ಲಾಕ್ ಡೌನ್ ಜಾರಿಯಲ್ಲಿರಲ್ಲಿದೆ.
PublicNext
07/08/2021 10:34 am