ಮಗುವಿನ ಕೂದಲು ಮುಂದೆ ಚೆನ್ನಾಗಿ ಬೆಳೆಯಬೇಕೆಂದರೆ ಸಣ್ಣವರಿದಾಗಲೇ ಕೂದಲಿನ ಬಗ್ಗೆ ಗಮನ ಕೊಡಬೇಕು. ಕೂದಲು ದಪ್ಪವಾಗಿ, ಸೊಂಪಾಗಿ, ಕಪ್ಪಾಗಿ ಬೆಳೆಯಲು ಈ ನೈಸರ್ಗಿಕ ವಿಧಾನಗಳನ್ನು ಬಳಸಿ.
ಪ್ರತಿ ದಿನ ಮಗುವಿನ ಕೂದಲಿಗೆ ಕೊಬ್ಬರಿ ಎಣ್ಣೆಯಿಂದ 20 ನಿಮಿಷಗಳ ಕಾಲ ಮಸಾಜ್ ಮಾಡಬೇಕು. ಒಂದು ಗಂಟೆಯ ಬಳಿಕ ಮಗುವಿನ ಕೂದಲನ್ನು ವಾಶ್ ಮಾಡಬೇಕು.
ಮಗುವಿನ ತಲೆ ಸ್ನಾನಕ್ಕೆ ಶಾಂಪು ಬಳಸಬೇಕು, ಇದು ತಲೆಯಲ್ಲಿರುವ ಕೊಳಕು ಮತ್ತು ಕೊಳೆಯನ್ನು ತೆಗೆದು ಹಾಕುತ್ತದೆ. ವಾರದಲ್ಲಿ 2 ಬಾರಿ ಮಗುವಿಗೆ ತಲೆ ಸ್ನಾನ ಮಾಡಿಸಿ.
ಅಲೋವೆರಾ ಚರ್ಮಕ್ಕೆ ಎಷ್ಟು ಉತ್ತಮವೋ ಅಷ್ಟೇ ಕೂದಲಿಗೂ ಕೂಡ ಉತ್ತಮವಾಗಿದೆ. ಮಗುವಿನ ಕೂದಲಿನ ಬೆಳವಣಿಗೆ ಸುಧಾರಿಸಲು ಅಲೋವೆರಾ ನೇರವಾಗಿ ಬಳಸಬಹುದು. ಇಲ್ಲವಾದರೆ ಶಾಂಪುವಿಗೆ ಮಿಕ್ಸ್ ಮಾಡಿ ಬಳಸಬಹುದು.
PublicNext
07/09/2022 03:16 pm