ಕೊಲೆಸ್ಟ್ರಾಲ್ ನಲ್ಲಿ ಎರಡು ವಿಧ 'ಒಳ್ಳೆಯ' ಕೊಲೆಸ್ಟ್ರಾಲ್ ಮತ್ತು 'ಕೆಟ್ಟ' ಕೊಲೆಸ್ಟ್ರಾಲ್ ಎಂಬ ಎರಡು ವಿಧವನ್ನು ಹೊಂದಿದೆ. ದೇಹದ ಉತ್ತಮ ಕಾರ್ಯನಿರ್ವಹಣೆಗೆ ಉತ್ತಮ ಕೊಲೆಸ್ಟ್ರಾಲ್ ಅತ್ಯಗತ್ಯ, ಆದರೆ ಕೆಟ್ಟ ಕೊಲೆಸ್ಟ್ರಾಲ್ ನಿಮ್ಮನ್ನು ಅನಾರೋಗ್ಯಕ್ಕೆ ಎಡೆಮಾಡಿಕೊಡುತ್ತದೆ.
ನಿಮ್ಮ ಆಹಾರದಲ್ಲಿ ಫೈಬರ್, ಜೀವಸತ್ವಗಳು, ಖನಿಜಗಳು ಮತ್ತು ಆರೋಗ್ಯಕರ ಕೊಬ್ಬುಗಳನ್ನು ಸೇರಿಸಿ. ಅದಕ್ಕಾಗಿ ತರಕಾರಿಗಳ ನಿಯಮಿತ ಸೇವನೆ ಅತ್ಯಗತ್ಯ.
ಬೀನ್ಸ್ : ಬೀನ್ಸ್ ನಲ್ಲಿ ಕರಗುವ ಫೈಬರ್ ಹೇರಳವಾಗಿದ್ದು, ದೇಹವು ಅದನ್ನು ಜೀರ್ಣಿಸಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಇದರರ್ಥ ನಿಮ್ಮ ಹೊಟ್ಟೆ ದೀರ್ಘಕಾಲದವರೆಗೆ ತುಂಬಿರುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಮತ್ತು ರಕ್ತನಾಳಗಳನ್ನು ಬಲಪಡಿಸುತ್ತದೆ.
ಬಿಳಿಬದನೆ: ಬಿಳಿಬದನೆ ಉತ್ಕರ್ಷಣ ನಿರೋಧಕಗಳ ಉತ್ತಮ ಮೂಲವಾಗಿದ್ದು, ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಬೆಂಡೆಕಾಯಿ: ಬೆಂಡೆಕಾಯಿ ಮ್ಯೂಸಿಲೇಜ್ ಎಂಬ ದಪ್ಪ ಜೆಲ್ ತರಹದ ವಸ್ತುವನ್ನು ಹೊಂದಿರುತ್ತದೆ, ಇದು ಜೀರ್ಣಕ್ರಿಯೆಯ ಸಮಯದಲ್ಲಿ ಕೊಲೆಸ್ಟ್ರಾಲ್ ನ್ನು ಬಂಧಿಸಿ, ಮಲದೊಂದಿಗೆ ಹೊರಹಾಕಲು ಕಾರಣವಾಗುತ್ತದೆ.
ಬೆಳ್ಳುಳ್ಳಿ: ಬೆಳ್ಳುಳ್ಳಿ ಪ್ರತಿಯೊಂದು ಖಾದ್ಯದಲ್ಲೂ ಬಳಸುವ ಒಂದು ಸಾಮಾನ್ಯ ವಸ್ತುವಾಗಿದ್ದು, ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಜೊತೆಗೆ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಬೆಳ್ಳುಳ್ಳಿ ಸಹಾಯ ಮಾಡುತ್ತದೆ.
ಎಲೆಕೋಸು: ಎಲೆಕೋಸು ಫೈಬರ್ ಮತ್ತು ಇತರ ಅನೇಕ ಪೋಷಕಾಂಶಗಳಲ್ಲಿ ಸಮೃದ್ಧವಾಗಿದ್ದು, ಒಂದು ಕಪ್ ಬೇಯಿಸಿದ ಎಲೆಕೋಸು 4.7 ಗ್ರಾಂ ಫೈಬರ್ ಅನ್ನು ಹೊಂದಿರುತ್ತದೆ.
ಹೆಚ್ಚಿನ ಫೈಬರ್ ಅನ್ನು ಸೇರಿಸುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಬಹುದು.
PublicNext
09/03/2022 05:10 pm