ರಾತ್ರಿ ಮಲಗುವ ಮುನ್ನ ಹಾಲು ಕುಡಿಯುವುದು ಒಳ್ಳೆಯದು ಎಂಬುವುದು ಎಲ್ಲರಿಗೂ ಗೊತ್ತು. ಆದರೆ ತುಪ್ಪ ತಿನ್ನುವುದರಿಂದಲೂ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ.
ಬಿಸಿಯಾದ ಹಾಲಿಗೆ ಒಂದು ಚಮಚ ತುಪ್ಪ ಸೇರಿಸಿ ಕುಡಿದರೆ ಜೀರ್ಣಕ್ರಿಯೆ ಸುಧಾರಣೆಯಾಗುತ್ತದೆ. ಇದು ಮಲಬದ್ಧತೆಯನ್ನೂ ದೂರ ಮಾಡುತ್ತದೆ.
ಇದರ ಸೇವನೆಯಿಂದ ಚಯಾಪಚಯ ಹೆಚ್ಚಿ ದೇಹಕ್ಕೆ ಶಕ್ತಿ ಹಾಗೂ ಉಲ್ಲಾಸ ದೊರೆಯುತ್ತದೆ. ದೇಹದಲ್ಲಿರುವ ಹಾನಿಕಾರಕ ವಿಷಕಾರಿ ಅಂಶಗಳು ಹೊರಬರುತ್ತವೆ.
ರಾತ್ರಿ ಚೆನ್ನಾಗಿ ನಿದ್ರೆ ಬರುವುದು ಮಾತ್ರವಲ್ಲ ವೀಕ್ ನೆಸ್ ಸಮಸ್ಯೆ ದೂರವಾಗುತ್ತದೆ. ಮಕ್ಕಳಿಗೆ ಇದನ್ನು ಕೊಡುವುದರಿಂದ ಬುದ್ಧಿಶಕ್ತಿ ಹೆಚ್ಚುತ್ತದೆ. ಗರ್ಭಿಣಿಯರು ಇದನ್ನು ಕುಡಿಯುವುದರಿಂದ ಅವರ ಆರೋಗ್ಯಕ್ಕೂ ಮಗುವಿನ ಬೆಳವಣಿಗೆಗೂ ಬಹಳ ಒಳ್ಳೆಯದು.
PublicNext
02/01/2022 03:44 pm