ಮೊಡವೆ ಪ್ರತಿಯೊಬ್ಬರಿಗೂ ಬೇಡದ ಅತಿಥಿ. ಯಾವುದಾದ್ರೂ ಫಂಕ್ಷನ್, ಪಾರ್ಟಿ, ಮದುವೆ, ಸಮಾರಂಭಗಳ ಸಮಯದಲ್ಲೇ ಮೊಡವೆ ಕಾಟ ಕೊಡುವುದು ಹೆಚ್ಚು.
ಸಿಂಪಲ್ಲಾಗಿ ಈ ಐದು ಹಣ್ಣುಗಳನ್ನು ಸೇವಿಸಿ, ಮೊಡವೆಯನ್ನು ಹೊಡೆದೋಡಿಸಬಹುದು.
ಸೇಬುಹಣ್ಣು : ಇದರಲ್ಲಿ ನೀರಿನ ಅಂಶ ಮತ್ತು ಪೋಷಕಾಂಶಗಳು ಹೆಚ್ಚಿವೆ. ನಿಮ್ಮ ಚರ್ಮವನ್ನು ಆರೋಗ್ಯವಾಗಿಡಲು ಸೇಬುಹಣ್ಣು
ಸಹಾಯ ಮಾಡುತ್ತದೆ. ಇದರಲ್ಲಿ ವಿಟಮಿನ್ ಸಿ, ಇ ಮತ್ತು ಎ ಇರುವುದರಿಂದ ನಿಮ್ಮ ಚರ್ಮವನ್ನು ಬೆಳ್ಳಗೆ, ಮೃದುವಾಗಿಡುತ್ತದೆ. ಸೇಬುಹಣ್ಣನ್ನು ತಿನ್ನುವುದು ಮಾತ್ರವಲ್ಲ, ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳಬಹುದು.
ಬಾಳೆಹಣ್ಣು : ಮೊಡವೆ ಜೊತೆಗಿನ ನಿಮ್ಮ ಗುದ್ದಾಟಕ್ಕೆ ಬಾಳೆಹಣ್ಣು ಸಾಥ್ ಕೊಡಲಿದೆ. ನಮ್ಮ ದೇಹದಲ್ಲಿರುವ ಬ್ಯಾಕ್ಟೀರಿಯಾವನ್ನು ಬಾಳೆಹಣ್ಣು ನಾಶ ಮಾಡುತ್ತದೆ. ಚರ್ಮವನ್ನು ಮೃದುವಾಗಿ, ಕಾಂತಿಯುಕ್ತವಾಗಿಡುತ್ತದೆ. ಬಾಳೆಹಣ್ಣನ್ನು ಕೂಡ ಫೇಸ್ ಮಾಸ್ಕ್ ಆಗಿ ಬಳಸಬಹುದು.
ಪಪ್ಪಾಯ : ಇದರಲ್ಲಿ ವಿಟಮಿನ್ ಎ ಜೊತೆಗೆ ನಿಮ್ಮ ಆರೋಗ್ಯಕರ ಚರ್ಮಕ್ಕೆ ಬೇಕಾದ ಪೋಷಕಾಂಶಗಳಿವೆ. ಪಪ್ಪಾಯ ಹಣ್ಣನ್ನು ಸೇವಿಸುವುದರಿಂದ ಉರಿಯೂತ ಮತ್ತು ಚರ್ಮ ಕೆಂಪಗಾಗುವಿಕೆ ಕಡಿಮೆಯಾಗುತ್ತದೆ.
ನಿಂಬೆಹಣ್ಣು : ಇದು ಸದಾಕಾಲ ತಾಜಾತನ ನೀಡುತ್ತದೆ. ಆ್ಯಂಟಿಒಕ್ಸಿಡೆಂಟ್ ನಂತೆ ಕೆಲಸ ಮಾಡುವ ನಿಂಬೆಹಣ್ಣು ದೇಹದಲ್ಲಿರುವ ಟಾಕ್ಸಿನ್ ಗಳನ್ನು ಹೊರಹಾಕುತ್ತದೆ. ಇದೊಂದು ನೈಸರ್ಗಿಕ ಕ್ಲೆನ್ಸರ್.
ಅವಕಾಡೊ ಹಣ್ಣು : ಜಗತ್ತಿನಾದ್ಯಂತ ಅವಕಾಡೊ ಒಂದು ಆರೋಗ್ಯಕರ ಸೂಪರ್ ಫುಡ್ ಅಂತಾನೇ ಹೆಸರುವಾಸಿ. ಇದರಲ್ಲಿ ವಿಟಮಿನ್ ಇ ಹೇರಳವಾಗಿದೆ. ಅವಕಾಡೊ ಆ್ಯಂಟಿಒಕ್ಸಿಡೆಂಟ್ ಚರ್ಮದಲ್ಲಿನ ತೇವಾಂಶವನ್ನು ಕಾಪಾಡುತ್ತದೆ. ಜೊತೆಗೆ ಆರೋಗ್ಯವಾಗಿಡುತ್ತದೆ.
PublicNext
04/09/2021 03:25 pm