ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸ್ತನ ಕ್ಯಾನ್ಸರ್ ಬಗ್ಗೆ ಎಚ್ಚರವಿರಲಿ! ಖಾಯಿಲೆಯ ಲಕ್ಷಣಗಳನ್ನು ತಿಳಿಯಿರಿ..

ಮಹಿಳೆಯರೇ ನಿಮ್ಮ ಆರೋಗ್ಯದಲ್ಲಿ ಏನೇ ವ್ಯತ್ಯಾಸವಾದರೂ ಹತ್ತಿರದ ವೈದ್ಯರಲ್ಲಿ ಪರೀಕ್ಷೆಗೆ ಒಳಗಾಗಿ. ಏಕೆಂದರೆ ಸಣ್ಣ ಸಮಸ್ಯೆಯೂ ಸಹ ಮುಂದೊಂದು ದಿನ ದೊಡ್ಡ ಪರಿಣಾಮವನ್ನು ಬೀರಬಹುದು.

ಸ್ತನ ಕ್ಯಾನ್ಸರ್ ಕೆಲವು ಲಕ್ಷಣಗಳು:

*ಸ್ತನದ ಸುತ್ತ ಗಟ್ಟಿಯಾಗುತ್ತದೆ. ಗಡ್ಡೆಯ ರೀತಿಯ ಅನುಭವ ಉಂಟಾಗುತ್ತದೆ. ಹಾಗಿರುವಾಗ ಸ್ತನದ ಸುತ್ತಲೂ ಗಡ್ಡೆಯಾದಂತೆ ಗಟ್ಟಿಯಾಗಿದ್ದರೆ ನಿರ್ಲಕ್ಷ್ಯ ಮಾಡುವುದು ಒಳ್ಳೆಯದಲ್ಲ. ತಕ್ಷಣವೇ ಹತ್ತಿರದ ವೈದ್ಯರಲ್ಲಿ ಸಮಸ್ಯೆಗಳನ್ನು ಹೇಳಿಕೊಳ್ಳುವುದು ಒಳ್ಳೆಯದು.

*ಮಹಿಳೆಯರು ಫ್ಯಾಚನ್ ಗಾಗಿ ಬ್ಯೂಟಿ ಪಾರ್ಲರ್ ಗಳಿಗೆ ಹೋಗುತ್ತಾರೆ. ಅಲ್ಲಿ ಬಳಸುವ ರಾಸಾಯನಿಕ ವಸ್ತುಗಳು ಆರೋಗ್ಯವನ್ನು ಹಾಳು ಮಾಡುತ್ತದೆ. ಇದರಿಂದಲೂ ಸ್ತನ ಕ್ಯಾನ್ಸರ್ ಸಮಸ್ಯೆ ಕಾಡುವ ಸಾಧ್ಯತೆಗಳಿವೆ. ಹಾಗಿರುವಾಗ ನಿಮ್ಮ ಆರೋಗ್ಯದ ಕುರಿತಾಗಿ ಹೆಚ್ಚು ಕಾಳಜಿ ಇರಲಿ. ಯಾವುದೇ ಕಾರಣಕ್ಕೂ ಸಣ್ಣ ಸಣ್ಣ ಸಮಸ್ಯೆಗಳ ಕುರಿತಾಗಿ ನಿರ್ಲಕ್ಷ್ಯ ತೋರಬೇಡಿ.

*ಮಹಿಳೆಯರು ಹೆಚ್ಚು ಬಿಗಿಯಾದ ಬಟ್ಟೆಯನ್ನು ಧರಿಸುವುದರಿಂದ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆಗಳಿರುತ್ತವೆ. ಹಾಗಿರುವಾಗ ರಾತ್ರಿ ಮಲಗುವಾಗ ಹಾಗೂ ಹೆಚ್ಚು ಆಯಾಸವಾಗುವ ಕೆಲಸದಲ್ಲಿ ತೊಡಗಿಕೊಂಡಿರುವಾಗ ಬಿಗಿಯಾದ ವಸ್ತ್ರವನ್ನು ಎಂದಿಗೂ ಧರಿಸದಿರಿ.

*ಅನುವಂಶೀಯತೆಯಿಂದಲೂ ಹೆಣ್ಣು ಮಕ್ಕಳಿಗೆ ಅಥವಾ ಹೆಂಗಸರಿಗೆ ಬ್ರಸ್ಟ್ ಕ್ಯಾನ್ಸರ್ ಕಾಣಿಸಿಕೊಳ್ಳಬಹುದು. ಅತಿಯಾದ ಮೊಬೈಲ್ ಬಳಕೆಯಿಂದಲೂ ಆರೋಗ್ಯಕ್ಕೆ ಕುತ್ತು ಉಂಟಾಗಬಹುದು.

*ಹಾಲುಣಿಸುವ ತಾಯಂದಿರು ಎಂದಿಗೂ ತಮ್ಮ ದೇಹವನ್ನು ಸ್ವಚ್ಛವಾಗಿಟ್ಟುಕೊಳ್ಳಿ. ಶುಭ್ರವಾದ ವಸ್ತ್ರವನ್ನೇ ಧರಿಸಿ. ಜತೆಗೆ ನಿಮ್ಮ ಆರೋಗ್ಯದ ಬಗೆಗೆ ಹೆಚ್ಚು ಕಾಳಜಿ ಇರಲಿ.

Edited By : Nirmala Aralikatti
PublicNext

PublicNext

29/07/2021 07:28 pm

Cinque Terre

46.71 K

Cinque Terre

0