ಬೆಲ್ಲವನ್ನು ಬಿಸಿ ನೀರಿಗೆ ಹಾಕಿಕೊಂಡು ಕುಡಿದರೆ ಅದರಿಂದ ಸಿಗುವ ಅದ್ಭುತ ಲಾಭಗಳ ಬಗ್ಗೆ ನಿಮಗೆ ತಿಳಿದಿರದು. ಈ ಲೇಖನದಲ್ಲಿ ಬೆಲ್ಲವನ್ನು ಬಿಸಿ ನೀರಿಗೆ ಹಾಕಿಕೊಂಡು ಕುಡಿದರೆ, ಅದು ದೇಹಕ್ಕೆ ಯಾವೆಲ್ಲಾ ಲಾಭಗಳಿವೆ ಗೊತ್ತೆ?
ಬೆಲ್ಲದಲ್ಲಿ ಅತ್ಯಧಿಕ ಪ್ರಮಾಣದ ಕಬ್ಬಿಣಾಂಶ, ಆಂಟಿಆಕ್ಸಿಡೆಂಟ್ ಮತ್ತು ವಿಟಮಿನ್ ಸಿ ಇದೆ. ಬಿಸಿ ನೀರಿನಲ್ಲಿ ಇದನ್ನು ಕುದಿಸಿದರೆ ಆಗ ಮತ್ತಷ್ಟು ಹೆಚ್ಚು ಲಾಭವಾಗಲಿದೆ.
ಜ್ವರದಿಂದ ರಕ್ಷಿಸುವುದು
• ಚಳಿಗಾಲದಲ್ಲಿ ಜ್ವರ ಬರುವುದು ಸಹಜ. ಹೀಗಾಗಿ ಬೆಲ್ಲವನ್ನು ಬಳಸಿಕೊಂಡು ದೇಹದ ಪ್ರತಿರೋಧಕ ಶಕ್ತಿಯನ್ನು ಬಲಪಡಿಸುವುದು ಅಗತ್ಯವಾಗಿದೆ. ಇದರಿಂದ ಪದೇ ಪದೇ ಅನಾರೋಗ್ಯಕ್ಕೆ ಒಳಗಾಗುವುದು ತಪ್ಪುವುದು.
• ಇದು ಆಕ್ಸಿಡೇಟಿವ್ ಒತ್ತಡದ ವಿರುದ್ಧ ಹೋರಾಡುವುದು ಮತ್ತು ದೇಹಕ್ಕೆ ಆರಾಮ ನೀಡುವುದು. ಸೋಂಕಿನ ವಿರುದ್ಧ ಹೋರಾಡುವ ಶಕ್ತಿ ನೀಡುವುದು.
ಹೊಟ್ಟೆಯ ಆರೋಗ್ಯವನ್ನು ಕಾಪಾಡುವುದು
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಲ್ಲ ಹಾಕಿದ ಬಿಸಿ ನೀರು ಕುಡಿದರೆ ಅದರಿಂದ ಹೊಟ್ಟೆಯ ಕ್ರಿಯೆಗಳು ಸರಾಗವಾಗುವುದು, ವಿಷಕಾರಿ ಅಂಶಗಳು ಹೊರಹೋಗುವುದು ಮತ್ತು ಜೀರ್ಣಕ್ರಿಯೆಯು ಸುಧಾರಣೆ ಆಗುವುದು.
ಅಸಿಡಿಟಿ, ಮಲಬದ್ಧತೆ ಮತ್ತು ಇತರ ಜೀರ್ಣಕ್ರಿಯೆ ಸಮಸ್ಯೆಯನ್ನು ಇದು ದೂರವಿಡುವುದು.
ಒಳಗಿನಿಂದ ಬಿಸಿಯಾಗಿಡುವುದು
ದೇಹದ ತಾಪಮಾನವನ್ನು ಕಾಪಾಡುವುದು. ಇದು ರಕ್ತನಾಳವನ್ನು ಶುದ್ಧೀಕರಿಸುವುದು, ಇದರಿಂದ ದೇಹವು ಬಿಸಿಯಾಗಿ ಇರುವುದು. ಚಯಾಪಚಯ ಉತ್ತಮಪಡಿಸಲು ಮತ್ತು ದೇಹವನ್ನು ನಿರ್ವಿಷಗೊಳಿಸಲು ಇದು ಸಹಕಾರಿ.
ಪ್ರತಿರೋಧಕ ಶಕ್ತಿ ವೃದ್ಧಿಸುವುದು
ಇದರಲ್ಲಿ ಖನಿಜಾಂಶಗಳು ಮತ್ತು ಆಂಟಿಆಕ್ಸಿಡೆಂಟ್ ಗಳಿದ್ದು, ಪ್ರತಿರೋಧಕ ಶಕ್ತಿ ವೃದ್ಧಿಸುವುದು ಮತ್ತು ಚಳಿಗಾಲದಲ್ಲಿ ಕಾಣಿಸುವಂತಹ ಜ್ವರದಿಂದ ಇದು ಪರಿಹಾರ ನೀಡುವುದು.
ದ್ರವ ಶೇಖರಣೆ ತಡೆಯುವುದು
ದ್ರವ ಶೇಖರಣೆಯಿಂದಾಗಿ ದೇಹದಲ್ಲಿ ತೂಕ ಹೆಚ್ಚಾಗುತ್ತದೆ. ಬೆಲ್ಲದಲ್ಲಿ ಇರುವಂತಹ ಪೊಟಾಶಿಯಂ ಅಂಶವು ದೇಹದಲ್ಲಿ ಎಲೆಕ್ಟ್ರೋಲೈಟ್ಸ್ ನ್ನು ಸಮತೋಲನದಲ್ಲಿ ಇಡುವುದು ಮತ್ತು ದ್ರವಾಂಶ ಶೇಖರಣೆ ಆಗದಂತೆ ನೋಡಿಕೊಳ್ಳುವುದು ಹಾಗೂ ತೂಕ ಇಳಿಸಲು ಇದು ಸಹಕಾರಿ.
ಬೆಲ್ಲದ ಪಾನೀಯ ಮಾಡುವುದು ಹೇಗೆ?
ಬಿಸಿ ನೀರಿಗೆ ಬೆಲ್ಲದ ಹುಡಿ ಹಾಕಿ. ಇದಕ್ಕೆ ಲಿಂಬೆ ರಸ ಕೂಡ ಬೆರೆಸಿದರೆ ರುಚಿ ಹೆಚ್ಚಾಗುವುದು ಮತ್ತು ಇದರಲ್ಲಿ ವಿಟಮಿನ್ ಸಿ ಕೂಡ ಇದೆ. ಇದನ್ನು ಉಗುರುಬೆಚ್ಚಗೆ ಇರುವಾಗ ಕುಡಿಯಬಹುದು.
ಬೆಲ್ಲದಲ್ಲಿ ಅಧಿಕ ಗ್ಲೈಸೆಮಿಕ್ ಇಂಡೆಕ್ಸ್ ಇದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಬೇಗನೆ ಹೆಚ್ಚಿಸಬಹುದು.
PublicNext
22/01/2021 03:34 pm