ನಿಮ್ಮ ಮುಖ ಆಕರ್ಷಕವಾಗಿ ಕಾಣಲು ಕೆಲವು ಮುಖಕ್ಕೆ ಸಂಬಂಧಿಸಿದ ಯೋಗ ವ್ಯಾಯಾಮಗಳು ಇಲ್ಲಿವೆ ನೋಡಿ.
ಹುಬ್ಬು ಮೇಲೆತ್ತುವುದು.
ನಿಮ್ಮ ಎರಡೂ ಕಣ್ಣುಗಳ ಅಡಿಯಲ್ಲಿ ಮೂರು ಬೆರಳುಗಳ ತುದಿಯನ್ನು ಒತ್ತಿ ಹಿಡಿದು ಕಣ್ಣನ್ನು ಒತ್ತಾಯಪೂರ್ವಕವಾಗಿ ತೆರೆಯಿರಿ.
ಬೆರಳಿಗೆ ವ್ಯತಿರಿಕ್ತವಾಗಿ ನಿಮ್ಮ ಹುಬ್ಬನ್ನು ಕೆಳಮಾಡಿದಾಗ ನಗುಮುಖ ಮಾಡಿ.
ಹೀಗೇ ಕೆಲವು ಸೆಕೆಂಡ್ ಗಳವರೆಗೆ ಇರಬೇಕು. 20 ಸೆಕೆಂಡ್ ಹೀಗೇ ಇರಬೇಕು ಹಾಗೂ ಈ ಸಮಯದಲ್ಲಿ ನೀವು ನಗುತ್ತಿರಬೇಕು.
ಈ ಪ್ರಕ್ರಿಯೆಯನ್ನು ಮೂರು ಬಾರಿ ಪುನರಾವರ್ತಿಸಿ.
ಕೆನ್ನೆ ಮೇಲೆತ್ತುವುದು
ನಿಮ್ಮ ಬಾಯಿಯನ್ನು "ಓ" ಆಕಾರ ಬರುವಂತೆ ತೆರೆಯಿರಿ. ಈಗ, ನಿಮ್ಮ ತುಟಿಯ ಮೇಲ್ಭಾಗವನ್ನು ನಿಮ್ಮ ಹಲ್ಲಿನ ಮೇಲೆ ಬರುವಂತೆ ಮಾಡಿ ನಿಮ್ಮ ಕೆನ್ನೆಯ ಸ್ನಾಯುಗಳು ಮೇಲೆ ಬರುವಂತೆ ನಗಬೇಕು.
ನಿಮ್ಮ ಕೆನ್ನೆಯ ಸ್ನಾಯುಗಳ ಮೇಲ್ಭಾಗದಲ್ಲಿ ನಿಮ್ಮ ತೋರುಬೆರಳನ್ನಿಡಿ. ಮತ್ತೆ ನಗಬೇಕು, ಸ್ನಾಯುಗಳನ್ನು ಕಣ್ಣಿನ ದಿಕ್ಕಿಗೆ ತಳ್ಳಿ, ಕೆಳಗೆ ತರಬೇಕು, ಈ ವ್ಯಾಯಾಮವನ್ನು 10 ಬಾರಿ ಪುನರಾವರ್ತಿಸಬೇಕು.
ಹ್ಯಾಪಿ ಚೀಕ್ ಸ್ಕಲ್ಪ್ಟಿಂಗ್
ನಿಮ್ಮ ಕೆನ್ನೆ ಗೋಚರಿಸದಂತೆ ಮತ್ತು ನಿಮ್ಮ ತುಟಿಯನ್ನು ಅರಳಿಸದೇ ನಗಲು ಪ್ರಯತ್ನಿಸಿ.
ಇದು ನೀವು ತುಟಿಯನ್ನು ತೋರಿಸಲು ಪ್ರಯತ್ನಿಸುತ್ತಿರುವಂತಿರಬೇಕು. ಬಾಯಿಯ ತುದಿಯ ಮೇಲೆ ಒತ್ತು ನೀಡುವಂತೆ ನಗಲು ಪ್ರಯತ್ನಿಸಿ, ಇದರಿಂದ ನಿಮ್ಮ ಬಾಯಿಯ ತುದಿಯಲ್ಲಿ ಸ್ವಲ್ಪ ಉರಿದಂತಾಗಬಹುದು.
ಈಗ, ನಿಮ್ಮ ತೋರುಬೆರಳನ್ನು ನಿಮ್ಮ ಬಾಯಿಯ ಎರಡೂ ತುದಿಯಲ್ಲಿ ಒತ್ತಿ ನೀವು ಸ್ನಾಯುವನ್ನು ಒತ್ತುತ್ತಿರುವಂತೆ ಕೆನ್ನೆಯ ಮೂಳೆಗಳವರೆಗೆ ಬೆರಳನ್ನು ಜಾರಿಸಬೇಕು.
ಸ್ನಾಯುವನ್ನು ಕೆನ್ನೆಯ ಮೂಳೆಯ ಬಳಿ ಬರುವಂತೆ ಮಾಡಿ. ನೀವು ನಿಮ್ಮ ಕೆನ್ನೆಯ ಮೂಳೆಯ ತುದಿಗೆ ಬಂದಾಗ, 20 ಸೆಕೆಂಡ್ ಗಳವರೆಗೆ ಹಾಗೆಯೇ ಬಿಡಿ, ಸ್ನಾಯುಗಳು ನಿಮ್ಮ ಕೆನ್ನೆಯಲ್ಲಿ ಬಿಗಿಯಾದಂತೆನಿಸುತ್ತದೆ. ಇದನ್ನು ಮೂರು ಬಾರಿ ಪುನರಾವರ್ತಿಸಿ.
ದವಡೆ ಮತ್ತು ಕುತ್ತಿಗೆ ಬಿಗಿತ
ನಿಮ್ಮ ಬಾಯಿ ತೆರೆದು 'ಆಹ್'ಎಂದು ಶಬ್ದ ಮಾಡಿ. ನಿಮ್ಮ ಕೆಳತುಟಿಯನ್ನು ಮಡಚಿ, ನಿಮ್ಮ ತುಟಿಯ ತುದಿಯನ್ನು ನಿಮ್ಮ ಬಾಯಿಯೊಳಗೆ ಸೇರಿಸಿ, ನಿಮ್ಮ ಕೆಳ ದವಡೆ ಮುಂದೆ ಬರುವಂತೆ ಸಾಧ್ಯವಾದಷ್ಟೂ ವಿಸ್ತರಿಸಿ.
ನಿಮ್ಮ ಕೆಳದವಡೆಯನ್ನು 10 ಬಾರಿ ತೆರೆದು ಮುಚ್ಚಿ. 10 ನೇ ಬಾರಿ, ನಿಮ್ಮ ಗದ್ದ ಮೇಲ್ಛಾವಣಿ ನೋಡುವಂತಿರಬೇಕು ಹಾಗೂ ನಿಮ್ಮ ಮುಖದ ಭಾಗ ಎತ್ತಿದಂತಿರಬೇಕು. ಈ ವ್ಯಾಯಾಮವನ್ನು ಮೂರು ಬಾರಿ ಪುನರಾವರ್ತಿಸಿ.
ಹಣೆಯ ಮೇಲ್ಭಾಗ ಎತ್ತುವುದು
ನಿಮ್ಮ ಬೆರಳತುದಿಯನ್ನು ನಿಮ್ಮ ಹಣೆಯ ಮೇಲ್ಭಾಗಕ್ಕೆ ಒತ್ತಿ, ನಿಮ್ಮ ದವಡೆ ಮುಚ್ಚಿದಂತಿರಬೇಕು.
ನಿಮ್ಮ ಹಲ್ಲುಗಳನ್ನು ಒಟ್ಟಾಗಿ ಸೇರಿಸಿ, ನಿಮ್ಮ ಗದ್ದವನ್ನು ಬಾಗಿಸಿ. ನೀವು ನಿಮ್ಮ ಹಲ್ಲು ಕಚ್ಚುವಾಗ ಮತ್ತು ನಿಮ್ಮ ಕಿವಿಯನ್ನು ಹಿಮ್ಮುಖವಾಗಿ ಬಾಗಿಸುವಾಗ, ನಿಮ್ಮ ಹಣೆಯ ಮಧ್ಯಭಾಗದ ಮೇಲೆ ಗಮನ ಹರಿಸಿರಬೇಕು.
ಹೀಗೇ 10 ಸೆಕೆಂಡ್ ಗಳವರೆಗಿದ್ದು ನಂತರ ನಿಮ್ಮ ಹಲ್ಲುಗಳನ್ನು ಕೆಳಗೆ ತನ್ನಿ ಮತ್ತು 10 ಸೆಕೆಂಡ್ ಗಳವರೆಗೆ ಬಿಡುವು ತೆಗೆದುಕೊಳ್ಳಿ.
ಇದನ್ನು ಮೂರು ಬಾರಿ ಪುನರಾವರ್ತಿಸಿ.
PublicNext
10/11/2020 03:42 pm