ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಟಮಿನ್ “ಎ” ಗಾಗಿ ಈ ಆಹಾರ ಸೇವಿಸಿ

ದೇಹವು ಸರಾಗವಾಗಿ ಕಾರ್ಯನಿರ್ವಹಿಸಲು ಸಾಕಷ್ಟು ಪ್ರಮಾಣದ ವಿಟಮಿನ್ ಎ ಬೇಕಾಗುತ್ತದೆ.

ಇದು ಜೀವಕೋಶಗಳ ಬೆಳವಣಿಗೆ, ರೋಗನಿರೋಧಕ ಕ್ರಿಯೆ, ದೃಷ್ಟಿ ಮತ್ತು ಭ್ರೂಣದ ಬೆಳವಣಿಗೆಗೆ ತುಂಬಾ ಸಹಾಯಕ.

ಹಾಗೆಯೇ ವಿಟಮಿನ್ ಎ ಚರ್ಮಕ್ಕೆ ಪ್ರಯೋಜನಕಾರಿಯಾಗಿದ್ದು, ಇದು ಉಗುರುಗಳು ಮತ್ತು ಕೂದಲಿನ ಉತ್ತಮ ಬೆಳವಣಿಗೆಗೆ ಸಹ ಅತ್ಯಗತ್ಯ.

ವಿಟಮಿನ್ ಎ ಸಾಕಷ್ಟು ಪ್ರಮಾಣದಲ್ಲಿ ಕಂಡುಬರುವ ಅನೇಕ ಆಹಾರಗಳಿವೆ.

ಆಹಾರದಲ್ಲಿ ಜೀವಸತ್ವಗಳು ಮತ್ತು ಖನಿಜಾಂಶಗಳನ್ನು ಹೊಂದಿದ್ದರೆ ಮಾತ್ರ ಆರೋಗ್ಯವಂತರಾಗಿರಲು ಸಾಧ್ಯ.

ಅಂತಹ ಆಹಾರಗಳಾವುವು ಅದರಿಂದ ಸಿಗುವ ಪ್ರಯೋಜನಗಳೇನು ತಿಳಿದುಕೊಳ್ಳೋಣ.

ವಿಟಮಿನ್ ಎ ಯ ಪ್ರಯೋಜನಗಳು: ವಿಟಮಿನ್ ಎ ಸೇವಿಸುವುದರಿಂದ ಕಣ್ಣಿನ ದೃಷ್ಟಿ ಉತ್ತಮಗೊಳ್ಳುವುದಲ್ಲದೆ, ರಾತ್ರಿ ಕುರುಡುತನವನ್ನು ತಡೆಯುತ್ತದೆ.

ಆಹಾರದಲ್ಲಿ ಸಾಕಷ್ಟು ಪ್ರಮಾಣದ ವಿಟಮಿನ್ ಎ ಸೇರಿಸುವುದರಿಂದ ವೃದ್ಧಾಪ್ಯದ ದೃಷ್ಟಿ ದುರ್ಬಲತೆಯನ್ನು ದೂರ ಮಾಡಬಹುದು.

ಸಸ್ಯ ಮತ್ತು ಪ್ರಾಣಿ ಆಧಾರಿತ ಆಹಾರಗಳು ವಿಟಮಿನ್ ಎ ಯ ವಿವಿಧ ಮೂಲಗಳಾಗಿವೆ.

ಕಾಡ್ ಲಿವರ್ ಎಣ್ಣೆ, ಮೊಟ್ಟೆ, ಬಲವರ್ಧಿತ ಧಾನ್ಯಗಳು, ಹಸಿರು ಎಲೆಗಳ ತರಕಾರಿಗಳು, ಕಿತ್ತಳೆ ಮತ್ತು ಹಳದಿ ತರಕಾರಿಗಳು, ಕ್ಯಾರೆಟ್ ಮತ್ತು ಹಣ್ಣುಗಳಲ್ಲಿ ವಿಟಮಿನ್ ಎ ಕಂಡುಬರುತ್ತದೆ.

ಹಾಗೆಯೇ ಬೀಫ್ ಲಿವರ್, ಬಟರ್, ಬ್ಲೂಫಿನ್ ಟೂನಾ ಮೀನು, ಸಾಲ್ಮೋನ್ ಮೀನುಗಳ ಸೇವನೆಯಿಂದ ಕೂಡ ವಿಟಮಿನ್ ಎ ಪಡೆಯಬಹುದು.

Edited By : Nirmala Aralikatti
PublicNext

PublicNext

02/11/2020 04:00 pm

Cinque Terre

47 K

Cinque Terre

1