ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಮೆರಿಕ ಅಧ್ಯಕ್ಷ ಜೋ ಬೈಡನ್‌ಗೆ ಕ್ಯಾನ್ಸರ್: ಶ್ವೇತ ಭವನದಿಂದ ಸ್ಪಷ್ಟನೆ

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರಿಗೆ ಕ್ಯಾನ್ಸರ್ ತಗುಲಿರುವುದನ್ನು ಅಮೆರಿಕದ ಶ್ವೇತ ಭವನ ಸ್ಪಷ್ಟಪಡಿಸಿದೆ. ಈ ಕುರಿತು ಸಾಮಾಜಿಕ ಜಾಲತಾನಗಳಲ್ಲಿ ಕಳೆದ ಕೆಲವು ದಿನಗಳಿಂದ ಹೇಳಿಕೆಗಳು ಹರಿದಾಡುತ್ತಿದ್ದವು. ಈಗ ಶ್ವೇತ ಭವನದ ಅಧ್ಯಕ್ಷೀಯ ಸದನವು ಈ ಮಾಹಿತಿ ಅಧಿಕೃತ ಎಂದು ಹೇಳಿದೆ.

ಮಸಾಚುಸೆಟ್ಸ್‌ನ ಸೋಮರ್ಸೆಟ್‌ನಲ್ಲಿರುವ ಕಲ್ಲಿದ್ದಲು ಗಣಿ ಕಾರ್ಖಾನೆಗೆ ಭೇಟಿ ನೀಡಿದ ಅಮೆರಿಕ ಅಧ್ಯಕ್ಷರು, ತಮ್ಮ ಬಾಲ್ಯದ ಮನೆಯ ಬಳಿ ತೈಲ ಸಂಸ್ಕರಣಾಗಾರಗಳಿಂದ ಹೊರಸೂಸುವ ಹೊರಸೂಸುವಿಕೆಯ ಆರೋಗ್ಯದ ಪರಿಣಾಮಗಳ ಬಗ್ಗೆ ಮಾತನಾಡುವಾಗ ಕ್ಯಾನ್ಸರ್ ಹೇಳಿಕೆಗಳನ್ನ ನೀಡಿದರು. ಇದು ಬೈಡನ್‌ಗೆ ಕ್ಯಾನ್ಸರ್ ಇದೆಯೋ? ಇಲ್ಲವೋ? ಎಂಬ ಬಗ್ಗೆ ಟ್ವಿಟ್ಟರ್‌ನಲ್ಲಿ ವಿಶ್ವದಾದ್ಯಂತ ಚರ್ಚೆಗೆ ಕಾರಣವಾಯಿತು. ಆರೋಗ್ಯ ಸಮಸ್ಯೆಗಳ ಬಗ್ಗೆ ಬೈಡನ್ ಅವರ ಹಿಂದಿನ ಹೇಳಿಕೆಗಳು ಸಹ ಇದ್ದವು. ಸದ್ಯ ಈ ಎಲ್ಲ ಊಹಾಪೋಹಕ್ಕೆ ಶ್ವೇತಭವನ ಸ್ಪಷ್ಟನೆ ನೀಡಿದೆ.

Edited By : Nagaraj Tulugeri
PublicNext

PublicNext

21/07/2022 04:53 pm

Cinque Terre

46.82 K

Cinque Terre

0

ಸಂಬಂಧಿತ ಸುದ್ದಿ