ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ಬಳಿಕ ಅಫ್ಘನ್ ತೊರೆಯುವವರ ಸಂಖ್ಯೆ ಹೆಚ್ಚಿದೆ. ಅಲ್ಲದೆ ಅಫ್ಘನ್ ನಲ್ಲಿರುವ ಭಾರತೀಯರನ್ನು ವಾಪಸ್ಸ್ ಕರೆತರಲಾಗುತ್ತಿದೆ. ಹೀಗೆ ಭಾರತಕ್ಕೆ ಬಂದವರಿಗೆ 14 ದಿನ ಕ್ವಾರಂಟೈನ್ ಕಡ್ಡಾಯ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಆದೇಶಿಸಿದೆ.
ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ 14 ದಿನಗಳ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯಗೊಳಿಸಿದೆ. ಕಾಬೂಲ್ ದೇಶದಿಂದ ಸ್ಥಳಾಂತರಗೊಂಡ ಜನರಿಗೆ ಕಡ್ಡಾಯ ಪೂರ್ವ ಬೋರ್ಡಿಂಗ್ ಆರ್ ಟಿ-ಪಿಸಿಟಿಆರ್ ಪರೀಕ್ಷೆಯಿಂದ (ಪ್ರಸ್ತುತ ಅಂತರರಾಷ್ಟ್ರೀಯ ಪ್ರಯಾಣಿಕರಿಗೆ ಕಡ್ಡಾಯಗೊಳಿಸಲಾಗಿದೆ) ವಿನಾಯಿತಿ ನೀಡಲು ಈಗಾಗಲೇ ಅನುಮತಿ ನೀಡಿದೆ ಎಂದು ಸಚಿವಾಲಯ ಹೇಳಿದೆ.
ವಿಮಾನ ನಿಲ್ದಾಣದಿಂದ ನಜಾಫ್ ಘರ್ ನ ಚಾವ್ಲಾ ಶಿಬಿರಕ್ಕೆ ಪ್ರಯಾಣಿಕರನ್ನು ಸಾಗಿಸಲು ಐಟಿಬಿಪಿ ಅಗತ್ಯ ವ್ಯವಸ್ಥೆ ಮಾಡುತ್ತದೆ. ಪರೀಕ್ಷೆ ವೇಳೆ ಪಾಸಿಟಿವ್ ತಗುಲಿರುವುದು ಧೃಡವಾದರೆ ಕೋವಿಡ್ ಕೇರ್ ಸೆಂಟರ್ ಅಥವಾ ದೆಹಲಿಯ ಎನ್ ಸಿಟಿಯ ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸಬೇಕು ಎಂದು ಕೇಂದ್ರ ಸಚಿವಾಲಯ ತಿಳಿಸಿದೆ.
PublicNext
24/08/2021 08:53 pm