ವಾಷಿಂಗ್ಟನ್ : ಮಾನವ ಪ್ರಪಂಚದಲ್ಲಿ ಮನುಷ್ಯನ ಕೆಲವು ಅಂಗಾಂಗಗಳನ್ನು ಕಸಿ ಮಾಡುವುದನ್ನು ನಾವು ನೀವೆಲ್ಲ ನೋಡಿದ್ದೇವೆ ಸದ್ಯ ಅಮೆರಿಕದ ವೈದರು ಮಾಡಿರುವ ಕಾರ್ಯ ನಿಜಕ್ಕೂ ಪವಾಡವೇ ಸರಿ ಎನ್ನುವಂತಿದೆ.
ರಸ್ತೆ ಅಪಘಾತವೊಂದರಲ್ಲಿ ಗಂಭೀರವಾಗಿ ಗಾಯಗೊಂಡಿದ್ದ 22 ವರ್ಷದ ವ್ಯಕ್ತಿಯೊಬ್ಬರಿಗೆ ಅಮೆರಿಕಾದ ವೈದ್ಯಕೀಯ ತಂಡ ಯಶಸ್ವಿಯಾಗಿ ಮುಖ ಮತ್ತು ಎರಡು ಕೈಗಳನ್ನು ಕಸಿ ಮಾಡಲಾಗಿದೆ. ಈ ರೀತಿಯ ಶಸ್ತ್ರಚಿಕಿತ್ಸೆಗೆ ಒಳಗಾದ ಜಗತ್ತಿನ ಮೊದಲ ವ್ಯಕ್ತಿಯಾಗಿದ್ದಾರೆ.
ಜೋ ಡಿಮಿಯೊ ಎಂಬ ವ್ಯಕ್ತಿ 2018 ಜುಲೈ ತಿಂಗಳಲ್ಲಿ ರಾತ್ರಿ ಪಾಳಿಯ ಕೆಲಸ ಮುಗಿಸಿ ಕಾರಿನಲ್ಲಿ ಮನೆಗೆ ತೆರಳುತ್ತಿದ್ದಾಗ ನಿದ್ದೆಗೆ ಜಾರಿದರು. ಅವರ ಕಾರು ಪಲ್ಟಿಯಾಗಿ ಸ್ಫೋಟಿಸಿತು ಹಾಗೂ ಅವರ ದೇಹದ 80 ಶೇಕಡಕ್ಕೂ ಹೆಚ್ಚಿನ ಭಾಗಕ್ಕೆ ಗಂಭೀರ ಗಾಯವಾಯಿತು. ಅವರ ಬೆರಳಿನ ತುದಿಗಳು ಮುರಿದಿದ್ದವು, ಮುಖದ ಮೇಲೆ ಆಳವಾದ ಗಾಯಗಳಾಗಿದ್ದವು ಹಾಗೂ ಅವರ ತುಟಿಗಳು ಮತ್ತು ಕಣ್ಣು ರೆಪ್ಪೆಗಳನ್ನು ಕಳೆದುಕೊಂಡಿದ್ದರು. ಅದು ಅವರ ಕಣ್ಣ ದೃಷ್ಟಿಯ ಮೇಲೆ ಪರಿಣಾಮ ಬೀರಿತು ಹಾಗೂ ಅವರು ಸಾಮಾನ್ಯ ಹಾಗೂ ಸ್ವತಂತ್ರ ಜೀವನ ನಡೆಸುವುದು ಅಸಾಧ್ಯವಾಗಿತ್ತು.
ಅವರಿಗೆ ಸರಿ ಹೊಂದುವ ಓರ್ವ ದೇಹ ದಾನಿಯನ್ನು ಪತ್ತೆ ಹಚ್ಚಿ ಆ ವ್ಯಕ್ತಿಯ ಎರಡೂ ಕೈಗಳು ಮತ್ತು ಹಣೆ, ಹುಬ್ಬು, ಎರಡೂ ಕಿವಿಗಳು, ಮೂಗು, ಕಣ್ಣು ರೆಪ್ಪೆಗಳು, ತುಟಿಗಳು ಮತ್ತು ಅದರ ಜೊತೆಗಿನ ಬುರುಡೆ ಸೇರಿದಂತೆ ಸಂಪೂರ್ಣ ಮುಖವನ್ನು ಜೋ ಡಿಮಿಯೊಗೆ ಜೋಡಿಸಲಾಗಿದೆ.
2020 ಆಗಸ್ಟ್ 12ರಂದು 23 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು, ನರ್ಸ್ ಗಳು ಸೇರಿದಂತೆ 96 ಆರೋಗ್ಯ ಸಿಬ್ಬಂದಿ ಶಸ್ತ್ರಚಿಕಿತ್ಸೆಯಲ್ಲಿ ಪಾಲ್ಗೊಂಡಿದ್ದಾರೆ.
PublicNext
05/02/2021 07:38 am