ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಾರತದ ಸಹಾಯ ಪಡೆದು ಕಥೆ ಕಟ್ಟಿದ ಪಾಕಿಸ್ತಾನ..!

ನವದೆಹಲಿ: ಪಾಕಿಸ್ತಾನವು ಸಾಧ್ಯವಿರುವ ಪ್ರತಿಯೊಂದು ಅಂತಾರಾಷ್ಟ್ರೀಯ ಹಂತದಲ್ಲೂ ನಿರಂತರವಾಗಿ ಭಾರತದ ವಿರುದ್ಧವೇ ಇರುತ್ತದೆ. ಆದರೆ ಈಗ ಭಾರತ ನಿರ್ಮಿತ ಕೋವಿಶೀಲ್ಡ್ ಲಸಿಕೆಯನ್ನು ಅವಲಂಬಿಸಬೇಕಾಗದ ಪರಿಸ್ಥಿತಿ ಬಂದಿದೆ.

ಹೌದು. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ನೇತೃತ್ವದಲ್ಲಿ ನಡೆಯುತ್ತಿರುವ ಕೋವಾಕ್ಸ್ ಲಸಿಕೆ ಮೈತ್ರಿಕೂಟವು ಕಡಿಮೆ ವೆಚ್ಚದಲ್ಲಿ ಬಡ ರಾಷ್ಟ್ರಗಳಿಗೆ ಲಸಿಕೆ ನೀಡುವ ಕೆಲಸ ಮಾಡುತ್ತದೆ. ಇದರ ಫಲಾನುಭವಿಯಾಗಿರುವ ಪಾಕಿಸ್ತಾನವು ಚೀನಾವನ್ನು ಕೈಬಿಟ್ಟು ಭಾರತ ತಯಾರಿಸಿದ ಕೊರೊನಾ ವ್ಯಾಕ್ಸಿನ್ ಮೊರೆ ಹೋಗಿದೆ.

ವರದಿಗಳ ಪ್ರಕಾರ, ಭಾರತದಲ್ಲಿ ತಯಾರಾಗುತ್ತಿರುವ ಸುಮಾರು ಏಳು ದಶಲಕ್ಷದಷ್ಟು ಅಸ್ಟ್ರಾಜೆನೆಕಾದ ಕೋವಿಶೀಲ್ಡ್ ಲಸಿಕೆಯನ್ನು ಮುಂದಿನ ವಾರದಲ್ಲಿ ಪಾಕಿಸ್ತಾನಕ್ಕೆ ನೀಡಲು ಸಿದ್ಧತೆ ನಡೆದಿದೆ. ಈ ಮೂಲಕ ಸುತ್ತಿಬಳಸಿ ಪಾಕಿಸ್ತಾನವು ಭಾರತದ ಸಹಾಯ ಪಡೆದುಕೊಳ್ಳುತ್ತಿದೆ.

ಸಿನೊಫಾರ್ಮ್‌ನ ಕೋವಿಡ್ -19 ಲಸಿಕೆಯ ಮೊದಲ ಬ್ಯಾಚ್ ತರಲು ವಿಶೇಷ ಪಾಕಿಸ್ತಾನಿ ವಿಮಾನವು ಈ ಹಿಂದೆ ಚೀನಾಕ್ಕೆ ತೆರಳಿತ್ತು. ಆದಾಗ್ಯೂ ಚೀನಾದ ಲಸಿಕೆಯ ಪರಿಣಾಮದ ವಿರುದ್ಧ ಆತಂಕಗಳು ಎದ್ದಿವೆ ಮತ್ತು ಚೀನೀ ಲಸಿಕೆಗಳ ಪ್ರಯೋಗ ನಡೆಸುವ ನಿರ್ಧಾರವನ್ನು ಅನೇಕ ದೇಶಗಳು ಈಗ ಹಿಮ್ಮೆಟ್ಟಿಸಿವೆ. ಚೀನಾದ ಲಸಿಕೆಗಳ ಜೊತೆಗೆ ಭಾರತೀಯ ನಿರ್ಮಿತ ಕೋವಿಶೀಲ್ಡ್‌ನ 17 ಮಿಲಿಯನ್ ಡೋಸ್‌ಗಳು ದೇಶಕ್ಕೆ ತಲುಪಲಿದೆ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರ ಆರೋಗ್ಯದ ವಿಶೇಷ ಸಹಾಯಕ ಡಾ.ಫೈಸಲ್ ಸುಲ್ತಾನ್ ಭಾನುವಾರ ಹೇಳಿದ್ದಾರೆ.

"ಅಸ್ಟ್ರಾಜೆನೆಕಾ ಭಾರತದಲ್ಲಿ ತಯಾರಾಗುತ್ತಿದ್ದರೂ, ಇದು ಕೋವಾಕ್ಸ್ ಮೂಲಕ ಬರಲಿದೆ. ಇದು ಅಂತರರಾಷ್ಟ್ರೀಯ ಒಕ್ಕೂಟವಾಗಿದ್ದು, ಪಾಕಿಸ್ತಾನದ ಶೇ.20 ಜನಸಂಖ್ಯೆಗೆ ಉಚಿತ ಲಸಿಕೆ ನೀಡಲಾಗುವುದು. ಡಿಆರ್‍ಪಿ (ಡ್ರಗ್ ರೆಗ್ಯುಲೇಟರಿ ಅಥಾರಿಟಿ ಆಫ್ ಪಾಕಿಸ್ತಾನ್) ಈಗಾಗಲೇ ಸಿನೊಫಾರ್ಮ್ ಮತ್ತು ಅಸ್ಟ್ರಾಜೆನೆಕಾ ಎರಡನ್ನೂ ನೋಂದಾಯಿಸಿದೆ'' ಎಂದು ಡಾ.ಸುಲ್ತಾನ್ ತಿಳಿಸಿದ್ದಾರೆ.

ವಿಶ್ವದ ಅತಿದೊಡ್ಡ ಲಸಿಕೆ ಉತ್ಪಾದನಾ ಕಂಪನಿಯಾದ ಪುಣೆ ಮೂಲದ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾವು 3 ಮಿಲಿಯನ್ ಡಾಲರ್ ವೆಚ್ಚದಲ್ಲಿ ಯುಎನ್‌ನಿಂದ GAVI-Covax ಮೈತ್ರಿಕೂಟಕ್ಕೆ 200 ಮಿಲಿಯನ್ ಡೋಸ್ ಕೋವಿಶೀಲ್ಡ್ ಮತ್ತು ನೊವಾವಾಕ್ಸ್‌ಗಳನ್ನು ಪೂರೈಸಲಿದೆ ಎಂದು ಜನವರಿಯಲ್ಲಿ ವರದಿಯಾಗಿತ್ತು.

ಭಾರತದ ಲಸಿಕೆ ರಾಜತಾಂತ್ರಿಕತೆ:

ವಿಶ್ವದ ಅತಿದೊಡ್ಡ ಲಸಿಕೆ ತಯಾರಕ ಹೆಗ್ಗಳಿಕೆಯ ಭಾರತವು ತನ್ನ ನೆರೆಯ ಮತ್ತು ಇತರ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಲಸಿಕೆಗಳನ್ನು ಯಶಸ್ವಿಯಾಗಿ ಪೂರೈಸುವ ಮೂಲಕ ಮತ್ತೆ ವಿಶ್ವದ ಸಹಾಯಕ್ಕೆ ಬಂದಿದೆ. ಭಾರತವು "ಲಸಿಕೆ ಮೈತ್ರಿ" ಎಂದು ಕರೆಯಲ್ಪಡುವ ತನ್ನ ಮಹತ್ವದ ಹೆಜ್ಜೆಯ ಮೊದಲ ಹಂತದಲ್ಲಿ ಒಂಬತ್ತು ದೇಶಗಳಿಗೆ 6 ದಶಲಕ್ಷಕ್ಕೂ ಹೆಚ್ಚಿನ ಕೊರೊನಾ ವಾಕ್ಸಿನ್ ನೀಡುತ್ತಿದೆ.

Edited By : Vijay Kumar
PublicNext

PublicNext

02/02/2021 09:31 am

Cinque Terre

77.03 K

Cinque Terre

8

ಸಂಬಂಧಿತ ಸುದ್ದಿ