ಲಂಡನ್: ಬ್ರಿಟನ್ ವೈರಸ್ ಎಂದೇ ಹೆಸರಾಗುತ್ತಿರುವ ರೂಪಾಂತರ ಕೊರೊನಾ ವೈರಸ್ ವೇಗವಾಗಿ ಹರಡುತ್ತಿರುವುದರಿಂದ ಫೆಬ್ರುವರಿ ಮಧ್ಯಭಾಗದವರೆಗೂ ಬ್ರಿಟನ್ ನಲ್ಲಿ ಮತ್ತೆ ಲಾಕ್ ಡೌನ್ ಘೋಷಣೆ ಮಾಡಲಾಗಿದೆ.
ಈ ಬಗ್ಗೆ ಪ್ರಧಾನಿ ಬೋರಿಸ್ ಜಾನ್ಸನ್ ಸರ್ಕಾರಿ ಮಾಧ್ಯಮ ದೂರದರ್ಶನದಲ್ಲಿ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.
ಬುಧವಾರದಿಂದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಬಂದ್ ಆಗಲಿವೆ ಎಂದು ಅವರು ತಿಳಿಸಿದ್ದಾರೆ.
ಈಗಾಗಲೇ ದೇಶದ ಒಟ್ಟು ಜನಸಂಖ್ಯೆಯ ಮುಕ್ಕಾಲುಭಾಗ ಜನರು ಕಠಿಣ ನಿರ್ಬಂಧಗಳ ಅಡಿಯಲ್ಲಿ ಬದುಕುತ್ತಿದ್ದರೂ ಸೋಂಕು ತಡೆಯಲು ಸಾಧ್ಯವಾಗುತ್ತಿಲ್ಲ, ಸೋಮವಾರ ಒಂದೇ ದಿನ 27 ಸಾವಿರ ಜನರಿಗೆ ಸೋಂಕು ತಗಲಿದೆ.
ಕಳೆದ ಮಂಗಳವಾರದಿಂದ 80 ಸಾವಿರ ಹೊಸ ಪ್ರಕರಣಗಳು ಪತ್ತೆಯಾಗಿವೆ ಎಂದು ಅವರು ತಿಳಿಸಿದರು.
ಕಳೆದ ಏಪ್ರಿಲ್ ತಿಂಗಳಿಗೆ ಹೋಲಿಕೆ ಮಾಡಿದರೆ ಸೋಂಕು ಹರಡುವಿಕೆಯ ಪ್ರಮಾಣ ಶೇ 40 ರಷ್ಟು ಹೆಚ್ಚಾಗಿದೆ ಎಂದು ಬೋರಿಸ್ ಜಾನ್ಸನ್ ಕಳವಳ ವ್ಯಕ್ತಪಡಿಸಿದರು.
PublicNext
05/01/2021 08:04 am