ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಪತ್ನಿ ಫಸ್ಟ್ ಲೇಡಿ ಮೆಲಾನಿಯಾ ಅವರಿಗೆ ಕೊರೋನಾ ವೈರಸ್ ಸೋಂಕು ತಗುಲಿದೆ.
ಈ ಕುರಿತು ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದು, ನನಗೆ ಹಾಗೂ ಮೆಲಾನಿಯಾ ಗೆ ಕೊರೊನಾ ಪರೀಕ್ಷಾ ವರದಿ ಪಾಸಿಟಿವ್ ಬಂದಿದೆ. ನಾವು ಕೂಡಲೇ ಕ್ವಾರಂಟೀನ್ಗೆ ಒಳಗಾಗಿ ಚಿಕಿತ್ಸೆ ಪ್ರಕ್ರಿಯೆಗಳೂ ಆರಂಭವಾಗುತ್ತಿವೆ, ಒಟ್ಟಿಗೆ ಚಿಕಿತ್ಸೆ ಪಡೆಯುತ್ತಿದ್ದೇವೆ, ನಾವಿಬ್ಬರೂ ಒಟ್ಟಾಗಿ ಇದರಿಂದ ಹೊರಬರಲಿದ್ದೇವೆ" ಎಂದು ಟ್ರಂಪ್ ಟ್ವೀಟ್ ಮೂಲಕ ಖಚಿತಪಡಿಸಿದ್ದಾರೆ.
ಅವರ ಉನ್ನತ ಸಲಹೆಗಾರರಾದ ಹೋಪ್ ಹಿಕ್ಸ್ ಅವರಿಗೆ ಕೊರೋನಾ ಸೋಂಕು ದೃಢಪಟ್ಟ ಬೆನ್ನಲ್ಲೇ ಇದೀಗ ಡೊನಾಲ್ಡ್ ಟ್ರಂಪ್ ದಂಪತಿಗೂ ಕೊರೋನಾ ಸೋಂಕು ತಗುಲಿದೆ.
ಹೋಪ್ ಹಿಕ್ಸ್ ಅವರಿಗೆ ಸೋಂಕು ಬಂದ ಬೆನ್ನಲ್ಲೇ ಟ್ವೀಟ್ ಮಾಡಿದ್ದ ಟ್ರಂಪ್, ಕರ್ತವ್ಯದ ವೇಳೆ ಸಣ್ಣ ವಿರಾಮವನ್ನು ಕೂಡ ತೆಗೆದುಕೊಳ್ಳದೆ ತುಂಬಾ ಶ್ರಮಿಸುತ್ತಿದ್ದ ಹೋಪ್ ಹಿಕ್ಸ್ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಇದು ನಿಜಕ್ಕೂ ಭಯಾನಕ. ನನ್ನ ಪತ್ನಿ ಮತ್ತು ನಾನು ನಮ್ಮ ಕೋವಿಡ್ ಪರೀಕ್ಷೆ ಫಲಿತಾಂಶಗಳಿಗಾಗಿ ಕಾಯುತ್ತಿದ್ದೇವೆ. ಈ ಮಧ್ಯೆ, ನಾವು ನಮ್ಮ ಕ್ವಾರಂಟೈನ್ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತಿದ್ದೇವೆಂದು ಅಂದಿದ್ದರು.
PublicNext
02/10/2020 11:44 am