ಬೀಜಿಂಗ್: ಚೀನಾದಿಂದಲೇ ಆರಂಭವಾದ ಮಾರಕ ಕೊರೊನಾ ವೈರಸ್ ಅಲ್ಲಿನ ಜನರ ಜನ್ಮ ಜಾಲಾಡಿ ಕೈ ಬಿಟ್ಟಿದೆ. ಸಾಕಪ್ಪ ಸಾಕು ಈ ಸಾಂಕ್ರಾಮಿಕದ ಸಹವಾಸ ಎನ್ನುತ್ತ ಜನ ನಿಟ್ಟುಸಿರು ಬಿಡುತ್ತಿರುವಾಗ ಈಗ ಡ್ರ್ಯಾಗನ್ ಹಣ್ಣಿನಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.
2019ರಲ್ಲಿ ವುಹಾನ್‌ನ ಮಾಂಸ ಮಾರುಕಟ್ಟೆಯಲ್ಲಿನ ವ್ಯಾಪಾರಿಗಳಲ್ಲಿ ಮೊದಲು ಪತ್ತೆಯಾಗಿದ್ದ ಕೊರೊನಾ ವೈರಸ್, ಈಗ ವಿಯೆಟ್ನಾಂನಿಂದ ಆಮದು ಮಾಡಿಕೊಂಡಿದ್ದ ಹಣ್ಣುಗಳಲ್ಲಿ ಕಾಣಿಸಿಕೊಂಡಿದೆ ಎಂದು ಚೀನಾ ಅಧಿಕಾರಿಗಳು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಅನೇಕ ಸೂಪರ್ ಮಾರ್ಕೆಟ್‌ಗಳನ್ನು ಚೀನಾ ಲಾಕ್‌ಡೌನ್ ಮಾಡಿದೆ. ಡ್ರ್ಯಾಗನ್ ಫ್ರೂಟ್ ಮೇಲಿನ ನಿಷೇಧದ ಕಾರಣ ಸುಮಾರು 400 ಕಂಟೇನರ್ ಟ್ರಕ್‌ಗಳನ್ನು ವಿಯೆಟ್ನಾಂಗೆ ಮರಳಿ ಕಳುಹಿಸಲಾಗಿದೆ. ಇದರಿಂದ ಆ ದೇಶಕ್ಕೆ ಸುಮಾರು ಶೇ 30ರಷ್ಟು ನಷ್ಟ ಉಂಟಾಗಿದೆ. ಇತರೆ ಕೃಷಿ ಉತ್ಪನ್ನಗಳ ಆಮದಿನ ಮೇಲೆಯೂ ಚೀನಾ ಹದ್ದಿನ ಕಣ್ಣು ಇರಿಸಿದೆ.
PublicNext
07/01/2022 09:24 am