ನವದೆಹಲಿ : ವಿಶ್ವಕ್ಕೆ ಕಂಟಕವಾಗಿ ಪರಿಣಮಿಸಿದ ಕೊರೊನಾ ಸಾವು ನೋವುಗಳ ಸಂಖ್ಯೆ ತಕ್ಕಮಟ್ಟಿಗೆ ಕಂಟ್ರೋಲ್ ಗೆ ಬರುತ್ತಿರುವ ಬೆನ್ನಲ್ಲೇ ವಿದೇಶದಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದೆ. ಹೌದು ಜಗತ್ತಿನ ಹಲವು ದೇಶಗಳಲ್ಲಿ ಮತ್ತೆ ಕೋವಿಡ್ ಹೆಚ್ಚುತ್ತಿದೆ. ಸದ್ಯ ಆಸ್ಟ್ರೀಯಾದಲ್ಲಿ ಕೊರೊನಾ ಸೋಂಕು ಮಿತಿಮೀರುತ್ತಿರುವುದರಿಂದ ಅಲ್ಲಿನ ಸರ್ಕಾರ ಲಾಕ್ ಡೌನ್ ಮಾಡಲು ಸಿದ್ಧತೆಮಾಡಿಕೊಂಡಿದೆ.
ಈ ನಡುವೆ ಆಸ್ಟ್ರೀಯಾದ ಈ ನಡೆಗೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಇದರೊಂದಿಗೆ ನೆದರ್ ಲ್ಯಾಂಡ್ ನ ರೋಟರ್ ಡ್ಯಾಂ ನಲ್ಲಿ ಕೊರೊನಾ ಲಾಕ್ ಡೌನ್ ವಿರೋಧಿಸಿ ನಡೆದ ಪ್ರತಿಭಟನೆ ನಿಯಂತ್ರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ.
ಸ್ವಿಟ್ಜರ್ಲೆಂಡ್, ಕ್ರೊವೇಶಿಯಾ, ಇಟಲಿಯಲ್ಲಿಯೂ ಲಾಕ್ ಡೌನ್ ಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಆಸ್ಟ್ರೇಲಿಯಾದಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ರೂಪಿಸಿದ ಕಾನೂನಿಗೆ ತೀವ್ರ ವಿರೋಧ ಕೇಳಿ ಬಂದಿದೆ.
PublicNext
21/11/2021 10:11 pm