ಮಾಸ್ಕೊ: ಡೆಲ್ಟಾ ವೈರಸ್ಸಿಗಿಂತಲೂ ವೇಗವಾಗಿ ಹರಡುವ ಶಕ್ತಿಯುಳ್ಳ ರೂಪಾಂತರಿ ಮಾದರಿಯ ವೈರಸ್ ರಷ್ಯಾದಲ್ಲಿ ಪತ್ತೆಯಾಗಿದೆ. ಈಗಾಗಲೇ ಈ ಸೋಂಕಿನ ಲಕ್ಷಣ ಕೆಲವರಲ್ಲಿ ಕಾಣಿಸಿಕೊಂಡ ಬಗ್ಗೆ ವರದಿಯಾಗಿದೆ.
‘ಎವೈ.4.2’ ಎಂದು ಗುರುತಿಸಲಾಗಿರುವ ಈ ಮಾದರಿಯು ವ್ಯಾಪಕವಾಗಿ ಹರಡುವ ಸಾಧ್ಯತೆಗಳಿವೆ ಎಂದು ‘ರಾಷ್ಟ್ರೀಯ ಗ್ರಾಹಕ ನಿಗಾ ಸಂಸ್ಥೆ’ಯ ಹಿರಿಯ ಸಂಶೋಧಕ ಕಾಮಿಲ್ ಖಾಫಿಜೋವ್ ಹೇಳಿದ್ದಾರೆ. ಇದು ಡೆಲ್ಟಾ ವೈರಸ್ ಹರಡುವಿಕೆ ಪ್ರಮಾಣವನ್ನೂ ಮೀರಿಸಬಲ್ಲದು. ಆದ್ರೆ ಇದರ ಪ್ರಕ್ರಿಯೆ ತಡವಾಗುವ ಸಾಧ್ಯತೆ ಇದೆ. ‘ಎವೈ.4.2’ ವೈರಸ್ ವೇಗದ ಸಾಂಕ್ರಾಮಿಕವಾಗಿದೆ ಎಂದು ಕೂಡ ಖಾಫಿಜೋವ್ ಹೇಳಿದ್ದಾರೆ.
PublicNext
21/10/2021 10:36 pm