ಬೀಜಿಂಗ್: ಚೀನಾದಲ್ಲಿ ಮಹಾಮಾರಿ ಕೊರೊನಾ ಮತ್ತೆ ಉಲ್ಬಣವಾಗಿದೆ. ಈ ಹಿನ್ನೆಲೆಯಲ್ಲಿ ಬೇರೆ ದೇಶಗಳಿಗೆ ಚೀನಾದಿಂದ ಹೋಗುವ ವಿಮಾನಗಳ ಹಾರಾಟವನ್ನು ರದ್ದು ಮಾಡಲಾಗಿದೆ. ವಿಶ್ವದಲ್ಲಿ ಕೊರೊನಾ ಲಾಕ್‌ಡೌನ್ ನಿಯಮಗಳು ಕಡಿಮೆಯಾಗಿದ್ದರೂ ಕೂಡ ಚೀನಾದಲ್ಲಿ ಮಾತ್ರ ಇನ್ನೂ ಕೊರೊನಾ ಪ್ರಕರಣಗಳು ಮಾತ್ರ ಕಡಿಮೆಯಾಗಿಲ್ಲ. ಚೀನಾದಲ್ಲಿ ಶಾಲೆಗಳನ್ನು ಮುಚ್ಚಲಾಗಿದೆ. ಹಾಗೂ ಕೊರೊನಾ ಸೋಂಕು ತಡೆಯಲು ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿದೆ.
ಚೀನಾದಲ್ಲಿ ಪ್ರವಾಸಿ ತಾಣಗಳು, ಶಾಲೆಗಳು ಮತ್ತು ಮನರಂಜನಾ ಸ್ಥಳಗಳಿಗೆ ಜನರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಕೆಲ ಪ್ರದೇಶಗಳಲ್ಲಿ ಲಾಕ್‌ಡೌನ್ ಕೂಡ ವಿಧಿಸಲಾಗಿದೆ. ಕೊರೊನಾ ಸೋಕು ಹೆಚ್ಚಾಗಿರುವುದರಿಂದ ಚೀನಾದ ಕ್ಸಿಯಾನ್, ಗನ್ಸು, ಲಾನ್ಸೋಗೆ ವಿಮಾನಸೇವೆ ಸ್ಥಗಿತಗೊಳಿಸಲಾಗಿದೆ ಎನ್ನಲಾಗಿದೆ.
PublicNext
21/10/2021 09:31 pm