ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಾರತೀಯರು ಕೋವಿಡ್ ಲಸಿಕೆ ಪಡೆದಿದ್ದರೂ ಬ್ರಿಟನ್​​ನಲ್ಲಿ ಲೆಕ್ಕಕ್ಕಿಲ್ಲ- 10 ದಿನ ಕ್ವಾರಂಟೈನ್

ನವದೆಹಲಿ: ಭಾರತೀಯರು ಕೋವಿಡ್ ಲಸಿಕೆ ಪಡೆದಿದ್ದರೂ ಬ್ರಿಟನ್​​ನಲ್ಲಿ ಲೆಕ್ಕಕ್ಕಿಲ್ಲದಂತಾಗಿದೆ. ಬ್ರಿಟನ್‌ನ ಸರ್ಕಾರದ ಹೊಸ ಪ್ರಯಾಣ ಮಾರ್ಗಸೂಚಿ ಬಗ್ಗೆ ಭಾರೀ ವಿರೋಧ ವ್ಯಕ್ತವಾಗಿದೆ.

ಭಾರತ, ಆಫ್ರಿಕಾ, ದಕ್ಷಿಣ ಅಮೆರಿಕ, ಯುಎಇ, ಟರ್ಕಿ, ಜೋರ್ಡಾನ್, ಥೈಲ್ಯಾಂಡ್, ರಷ್ಯಾ ಹಾಗೂ ಇತರ ಹಲವು ದೇಶಗಳಲ್ಲಿ ಕೋವಿಡ್ ಲಸಿಕೆ ಪಡೆದುಕೊಂಡ ಜನರನ್ನು ಲಸಿಕೆ ಹಾಕದವರಂತೆ ಪರಿಗಣಿಸುವ ಬ್ರಿಟನ್ ಸರ್ಕಾರದ ನಿರ್ಧಾರಕ್ಕೆ ಬಂದಿದೆ. ಈ ದೇಶಗಳಿಂದ ಬ್ರಿಟನ್‌ಗೆ ಬರುವ ಜನರನ್ನು 10 ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಇರಿಸಲಾಗುತ್ತದೆ. ಬ್ರಿಟನ್‌ನ ಸರ್ಕಾರದ ಹೊಸ ಪ್ರಯಾಣ ಮಾರ್ಗಸೂಚಿ ಅಕ್ಟೋಬರ್‌ 4ರಿಂದ ಜಾರಿಗೆ ಬರಲಿದೆ.

Edited By : Vijay Kumar
PublicNext

PublicNext

21/09/2021 09:46 am

Cinque Terre

36.44 K

Cinque Terre

1

ಸಂಬಂಧಿತ ಸುದ್ದಿ