ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಪ್ಘಾನಿಸ್ತಾನದಿಂದ 'ಗುರು ಗ್ರಂಥ ಸಾಹೀಬ್' ತಂದಿದ್ದ 16 ಮಂದಿಗೆ ಕೊರೊನಾ

ನವದೆಹಲಿ: ಅಪ್ಘಾನಿಸ್ತಾನದ ತಾಲಿಬಾನಿಗಳ ಕ್ರೂರ ಹಿಡಿತದಿಂದ ಪಾರಾಗಿ ಸಿಖ್ ಪವಿತ್ರ ಗ್ರಂಥ 'ಗುರು ಗ್ರಂಥ ಸಾಹೀಬ'ವನ್ನು ಹೊತ್ತು ತಂದಿದ್ದವರ ಪೈಕಿ 16 ಜನರಿಗೆ ಕೊರೊನಾ ಪಾಸಿಟಿವ್ ಕಂಡುಬಂದಿದೆ.

ನಿನ್ನೆ ಮಂಗಳವಾರ ಒಟ್ಟು 78 ಜನ ಅಪ್ಘಾನಿಸ್ತಾನದಿಂದ ಭಾರತಕ್ಕೆ ಬಂದಿಳಿದಿದ್ದರು. ಇದರಲ್ಲಿ 16 ಜನರಿಗೆ ಕೊರೊನಾ ಪಾಸಿಟಿವ್ ಕಂಡುಬಂದಿದೆ. ಹೀಗಾಗಿ ಎಲ್ಲ 78ಜನರನ್ನೂ ಸದ್ಯ ಕ್ವಾರಂಟೈನ್ ನಲ್ಲಿ ಇಡಲಾಗಿದೆ. ಮೂವರು ಸಿಖ್ ಗ್ರಂಥಿಗಳು ಈ ಗ್ರಂಥವನ್ನು ಹೊತ್ತು ತಂದಿದ್ದರು. ಈ ಗ್ರಂಥವನ್ನು ಕೇಂದ್ರ ಸಚಿವ ಹರ್ ದೀಪ್ ಸಿಂಗ್ ಪುರಿ ಅವರು ಸ್ವಾಗತಿಸಿದ್ದರು.

Edited By : Nagaraj Tulugeri
PublicNext

PublicNext

25/08/2021 02:13 pm

Cinque Terre

93.21 K

Cinque Terre

0

ಸಂಬಂಧಿತ ಸುದ್ದಿ