ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇಸ್ರೇಲ್ ನಲ್ಲಿ 3ನೇ ಬಾರಿಗೆ ಲಾಕ್ ಡೌನ್!

ವಿಶ್ವದ ವಿನಾಶಕ್ಕೆ ಕಂಕಣಬದ್ದವಾಗಿ ಜನರನ್ನಾ ಕಂಗಾಲಾಗಿಸಿದ ಕೊರೊನಾ ತನ್ನ ಪಾರುಪತ್ಯೆವನ್ನು ಮುಂದುವರೆಸಿದೆ.

ಸದ್ಯ ಈ ಸೋಂಕಿನಿಂದ ವಿಶ್ವವೇ ತತ್ತರಿಸಿ ಹೋಗಿದೆ ಪ್ರಸ್ತುತ ರೂಪಾಂತರ ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಜೆರುಸಲೆಂ ಇಸ್ರೇಲ್ ಮೂರನೇ ಬಾರಿಗೆ ರಾಷ್ಟ್ರವ್ಯಾಪಿ ಲಾಕ್ ಡೌನ್ ವಿಧಿಸಲಿದೆ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಗುರುವಾರ ಹೇಳಿದ್ದಾರೆ.

ಈ ನಿರ್ಬಂಧಗಳು ಭಾನುವಾರ ಸಂಜೆ 5ಗಂಟೆಯಿಂದ ಜಾರಿಗೆ ಬರಲಿದ್ದು, ಇದು ಕನಿಷ್ಠ 14 ದಿನಗಳವರೆಗೆ ಜಾರಿಯಲ್ಲಿರುತ್ತದೆ ಎಂದಿದ್ದಾರೆ.

ಆದರೆ ಲಾಕ್ ಡೌನ್ ಘೋಷಣೆ ಅಂತಿಮಗೊಳ್ಳಲು ಕ್ಯಾಬಿನೆಟ್ ಅನುಮೋದನೆ ಬಾಕಿ ಇದೆ ಎಂದು ನೆತನ್ಯಾಹು ಕಚೇರಿಯ ಹೇಳಿಕೆ ತಿಳಿಸಿದೆ.

ಕೊರೊನಾವೈರಸ್ ಹೊಸ ರೂಪಾಂತರವು ಇಸ್ರೇಲ್ ದೇಶದಲ್ಲಿ ಹೆಚ್ಚು ಹರಡುತ್ತಿದ್ದು, ಹೊಸ ರೂಪಾಂತರದ ಮೊದಲ ಪ್ರಕರಣಗಳನ್ನು ಆರೋಗ್ಯ ಸಚಿವಾಲಯ ಪತ್ತೆ ಮಾಡಿದ ನಂತರ ಇದು ಸಂಭವಿಸಿದೆ.

ಇಸ್ರೇಲ್ ನಲ್ಲಿ 3.85 ಲಕ್ಷ ಕೋವಿಡ್ ಪ್ರಕರಣಗಳು ದಾಖಲಾಗಿದ್ದು, ಸಾವಿನ ಸಂಖ್ಯೆಯು 3,150ಕ್ಕೂ ಹೆಚ್ಚು ದಾಖಲಾಗಿದೆ.

Edited By : Nirmala Aralikatti
PublicNext

PublicNext

24/12/2020 06:57 pm

Cinque Terre

53.11 K

Cinque Terre

0