ಲಂಡನ್ : ಈಗಾಗಲೇ ವಿಶ್ವದ ಜನತೆಯನ್ನು ಹಿಂಡಿ ಹಿಪ್ಪೆ ಮಾಡುತ್ತಿರುವ ಡೆಡ್ಲಿ ಸೋಂಕು ಕೊರೊನಾ ಜನರ ನೆಮ್ಮದಿ ಕಸೆದುಕೊಂಡಿದೆ.
ಇದರ ಬೆನ್ನಲ್ಲೆ ಇದೀಗ ಬ್ರಿಟನ್ ನಲ್ಲಿ ಹೊಸ ಸ್ವರೂಪದ ಕೊರೊನಾ ವೈರಸ್ ಪತ್ತೆಯಾಗಿದ್ದು, ಹಾಲಿ ಇರುವ ವೈರಸ್ ತಳಿಗಿಂತ ಇದು ಶೇ.70ರಷ್ಟು ಹರಡುವಿಕೆ ವೇಗವನ್ನು ಹೊಂದಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ಬ್ರಿಟನ್ ನಲ್ಲಿ ಕೊರೊನಾ ವೈರಸ್ ನ ಹೊಸ ತಳಿ ಪತ್ತೆಯಾಗಿದೆ. ಇದು ವಿಜ್ಞಾನಿಗಳ ನಿರೀಕ್ಷೆಯನ್ನೂ ಮೀರಿ ಅತ್ಯಂತ ವೇಗವಾಗಿ ಹರಡುತ್ತಿದ್ದು, ಪರಿಸ್ಥಿತಿ ಕೈಮೀರಿದೆ ಎಂದು ಸ್ವತಃ ಬ್ರಿಟನ್ ಸರ್ಕಾರ ಹೇಳಿದೆ.
ಇದರ ಬೆನ್ನಲ್ಲೇ ಬ್ರಿಟನ್ ನಿಂದ ಬರುವ ಎಲ್ಲಾ ವಿಮಾನಗಳನ್ನು ಯೂರೋಪ್ ಹಲವು ರಾಷ್ಟ್ರಗಳು ರದ್ದುಪಡಿಸಿವೆ.
ಬ್ರಿಟನ್ ನ ಕೆಲವು ಭಾಗದಲ್ಲಷ್ಟೇ ಹೊಸ ಕೊರೊನಾವೈರಸ್ ಪತ್ತೆಯಾಗಿದೆ.
ಹೀಗಾಗಿ ಬ್ರಿಟನ್ ನ ನಗರ ಪ್ರದೇಶಗಳಲ್ಲಿ ಕಠಿಣ ಲಾಕ್ ಡೌನ್ ಹೇರಲಾಗಿದೆ.
ಕ್ರಿಸ್ ಮಸ್ ಮತ್ತು ಹೊಸ ವರ್ಷಾಚರಣೆಗಾಗಿ ಜನರು ಸೇರುವುದನ್ನು ನಿಷೇಧಿಸಲಾಗಿದೆ.
ಈ ವಿಷಯವನ್ನು ಬ್ರಿಟನ್ ಸರ್ಕಾರ ಘೋಷಿಸಿದ ಬೆನ್ನಲ್ಲೇ ನೆರೆಯ ರಾಷ್ಟ್ರಗಳು, ಬ್ರಿಟನ್ ಗೆ ವಿಮಾನ ಸಂಪರ್ಕವನ್ನು ರದ್ದುಪಡಿಸಿವೆ.
ಸೋಂಕು ಹರಡುವುದನ್ನು ತಡೆಗಟ್ಟಲು ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆಯು ಐರೋಪ್ಯ ರಾಷ್ಟ್ರಗಳಿಗೆ ಸೂಚನೆ ನೀಡಿದೆ.
PublicNext
21/12/2020 09:58 am