ಬೀಜಿಂಗ್: ವಿಶ್ವಕ್ಕೆ ಕಂಟಕವಾಗಿ ಪರಿಣಮಿಸಿದ ಡೆಡ್ಲಿ ಸೋಂಕು ಕೊರೊನಾ ಹುಟ್ಟು ಭಾರತದಿಂದಲೇ ಎಂದು ಚೀನಾ ಮತ್ತೆ ತನ್ನ ಮೊಂಡು ವಾದವನ್ನು ಮಂಡಿಸುತ್ತಿದೆ.
ಈ ರೀತಿ ಸುಳ್ಳು ವಾದ ಹಲಬುತ್ತಿರುವ ಚೀನಾ ಸದ್ಯ ನಗೆಪಾಟಲಿಗೆ ಗುರಿಯಾಗಿದೆ.
ಕೊರೊನಾ ವೈರಸ್ ಚೀನಾದಲ್ಲಿ ಸೃಷ್ಟಿಯಾಗಿಲ್ಲ. ಈ ವೈರಸ್ ನ ಮೂಲ ಭಾರತ ಎಂದು ಹೇಳಿ ತನ್ನ ಮೇಲೆ ಬಂದಿದ್ದ ಕಳಂಕವನ್ನು ತೊಳೆಯಲು ಮತ್ತೊಂದು ಸುಳ್ಳು ಹೇಳಿದೆ.
2019ರ ಬೇಸಿಗೆಯಲ್ಲಿ ಪ್ರಾಣಿಗಳಿಂದ ಮನುಷ್ಯರಿಗೆ ಅಶುದ್ಧ ನೀರಿನ ಮೂಲಕ ಮೊದಲು ವೈರಸ್ ಹರಡಿದೆ.
ಈ ವೈರಸ್ ಹೇಗೋ ವುಹಾನ್ ತಲುಪಿದೆ ಎಂದು ಹೇಳುತ್ತಿದೆ.
ವಿಶ್ವದ ವಿವಿಧ ರಾಷ್ಟ್ರಗಳಿಂದ ಆಹಾರ ಉತ್ಪನ್ನಗಳನ್ನು ಚೀನಾ ಆಮದು ಮಾಡಿಕೊಳ್ಳುತ್ತದೆ.
ವಿಶೇಷವಾಗಿ ಭಾರತದಿಂದ ಮೀನುಗಳನ್ನು ತರಿಸಿಕೊಳ್ಳುತ್ತದೆ. ಈ ಮೂಲಕ ಚೀನಾಗೆ ವೈರಸ್ ಪ್ರವೇಶ ಆಗಿರುವ ಸಾಧ್ಯತೆಯಿದೆ ಎಂದು ಚೀನಾದ ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ.
ವಿಶ್ವ ಆರೋಗ್ಯ ಸಂಸ್ಥೆ ಕೊರೊನಾ ವೈರಸ್ ಮೂಲ ಪತ್ತೆ ಹಚ್ಚಲು ಆರಂಭಿಸುತ್ತಿರುವಾಗಲೇ ಚೀನಾ ಮಾಧ್ಯಮಗಳು ಈ ವರದಿ ಪ್ರಕಟಿಸುತ್ತಿರುವುದು ವಿಶೇಷವಾಗಿದೆ.
ಕೊರೊನಾ ವೈರಸ್ ನ ಮೂಲ ಚೀನಾ ಅಲ್ಲವೇ ಅಲ್ಲ. ಅಮೆರಿಕ, ಆಸ್ಟ್ರೇಲಿಯಾ, ಭಾರತ, ಇಟಲಿ, ರಷ್ಯಾ, ಗಣರಾಜ್ಯ , ಸರ್ಬಿಯಾ ಆಗಿರಬಹುದು.
ಈ ವಾದಕ್ಕೆ ಪೂರಕ ಅಂಶ ಎಂಬಂತಗೆ ಭಾರತ ಮತ್ತು ಬಾಂಗ್ಲಾದೇಶದಲ್ಲಿ ಕಡಿಮೆ ರೂಪಾಂತರದ ವೈರಸ್ ಮಾದರಿಗಳು ಪತ್ತೆಯಾಗಿವೆ.
ಈ ಕಾರಣಕ್ಕೆ ಈ ದೇಶಗಳಲ್ಲಿ ಕೊರೊನಾ ವೈರಸ್ ಆರಂಭದಲ್ಲಿ ಪತ್ತೆ ಆಗಿರಬಹುದು.
ಭಾರತದಲ್ಲಿ ಆರೋಗ್ಯ ವ್ಯವಸ್ಥೆ ಮೊದಲೇ ಸರಿ ಇಲ್ಲ. ಅಷ್ಟೇ ಅಲ್ಲದೇ ಯುವಕರ ಸಂಖ್ಯೆ ಜಾಸ್ತಿ ಇರುವ ಕಾರಣ ವೈರಸ್ ಬಂದಿರುವ ವಿಚಾರ ಆರಂಭದಲ್ಲಿ ತಿಳಿದಿರಲಿಲ್ಲ ಎಂಬ ಮೊಂಡುವಾದವನ್ನು ಮಂಡಿಸಿದೆ.
PublicNext
29/11/2020 10:36 am