ಮ್ಯಾಡ್ರಿಡ್: ಸ್ಪೇನ್‌ನಲ್ಲಿ ಎರಡನೇ ಹಂತದ ಕೊರೊನಾ ಆತಂಕ ಶುರುವಾಗಿದೆ. ಈ ನಿಟ್ಟಿನಲ್ಲಿ ಅಲ್ಲಿನ ಸರ್ಕಾರವು ಭಾನುವಾರದಂದು ರಾಷ್ಟ್ರೀಯ ತುರ್ತು ಪರಿಸ್ಥಿತಿ ಮತ್ತು ಕ್ಯಾನರಿ ದ್ವೀಪ ಪ್ರದೇಶ ಹೊರತುಪಡಿಸಿ ಇಡೀ ದೇಶಾದ್ಯಂತ ಕರ್ಫ್ಯೂ ಜಾರಿಗೊಳಿಸಿದೆ.
ಈ ಬಗ್ಗೆ ಮಾತನಾಡಿರುವ ಸ್ಪೇನ್ ಪ್ರಧಾನಿ ಪೆಡ್ರೋ ಸ್ಯಾಂಝ್ ಟೆಲಿವಿಷನ್, 'ಹೊಸದಾಗಿ ಘೋಷಿಸಿರುವ ತುರ್ತುಪರಿಸ್ಥಿತಿ ಮೇ ವರೆಗೆ ಮುಂದುವರಿಯಲಿದೆ. ಹೀಗಾಗಿ ಒತ್ತಡಕ್ಕೆ ಒಳಗಾಗುವಂತಾಗಿದೆ' ಎಂದು ಹೇಳಿದ್ದಾರೆ.
ಕಳೆದ ಕೆಲ ವಾರಗಳಿಂದ ಯುರೋಪ್‌ನ ಅನೇಕ ದೇಶಗಳಲ್ಲಿ ಎರಡನೇ ಹಂತದ ಕೊರೊನಾ ಆಂತಕ ಶುರುವಾಗಿದೆ. ಸದ್ಯ ಪಶ್ಚಿಮ ಯುರೋಪಿನಲ್ಲಿ ಅತಿ ಹೆಚ್ಚು ಸೋಂಕಿತರಿದ್ದಾರೆ. ಶುಕ್ರವಾರದ ಮಾಹಿತಿ ಪ್ರಕಾರ ಒಟ್ಟು ಪ್ರಕರಣಗಲ ಸಂಖ್ಯೆ 1,046,132ಕ್ಕೆ ಏರಿಕೆಯಾಗಿದ್ದು, ಸಾವಿನ ಸಂಖ್ಯೆ 35,000ಕ್ಕೆ ತಲುಪಿದೆ.
ಕೊರೊನಾ ಹೆಚ್ಚುತ್ತಿರುವುದರಿಂದ ಕರ್ಫ್ಯೂ ವಿಧಿಸುವಂತೆ ಸಾರ್ವಜನಿಕರಿಂದ ಭಾರೀ ಒತ್ತಡ ಬಂದಿತ್ತು. ಹೀಗಾಗಿ ಎರಡೂವರೆ ಗಂಟೆಗಳ ಕಾಲ ಕ್ಯಾಬಿನೆಟ್ ಸಭೆಯಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸದ್ಯ ಇರುವ 10ಗಂಟೆ ರಾತ್ರಿಯಿಂದ ಬೆಳಗ್ಗಿನ ಜಾವ 5ಗಂಟೆವರೆಗೆ ಕರ್ಫ್ಯೂ ಅನ್ನು ರಾತ್ರಿ 11ಗಂಟೆಯಿಂದ ಬೆಳಗ್ಗಿನ 6ಗಂಟೆವರೆಗೆ ವಿಸ್ತರಿಸಲಾಗಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
PublicNext
28/10/2020 06:08 pm