ವಾಷಿಂಗ್ಟನ್ : ವಿಶ್ವದ ಮನುಕುಲವನ್ನೇ ಹಿಂಡಿ ಹಿಪ್ಪೆ ಮಾಡಿದ ಡೆಡ್ಲಿ ಸೋಂಕು ಪರಿಚಯಿಸಿದ ಚೀನಾ ದೊಡ್ಡ ಬೆಲೆಯನ್ನು ತೆರಬೇಕಾಗುತ್ತದೆ ಎಂದು ವಿಶ್ವದ ದೊಡ್ಡಣ್ಣ ಎಚ್ಚರಿಕೆ ನೀಡಿದೆ.
ಹೌದು ಈ ಕುರಿತು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವಿಟರ್ ನಲ್ಲಿ ವಿಡಿಯೇ ಸಂದೇಶವೊಂದನ್ನು ಹಂಚಿಕೊಂಡಿರುವ ಟ್ರಂಪ್ ಅವರು ಕೊರೊನಾ ಸಾಂಕ್ರಾಮಿಕ ವಿಚಾರದಲ್ಲಿ ಚೀನಾ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ.
ಸಾಂಕ್ರಾಮಿಕ ರೋಗದಿಂದ ನಿಮ್ಮನ್ನು ಮುಕ್ತಗೊಳಿಸಲು ನಾನು ಹೊರಟಿದ್ದೇನೆ.
ಅದಕ್ಕಾಗಿ ನೀವು ಬೆಲೆ ತೆರಬೇಕಿಲ್ಲ. ಕೊರೋನಾ ಸೋಂಕಿಗೊಳಗಾಗಿರುವುದು ನಿಮ್ಮ ತಪ್ಪಲ್ಲ. ಇದು ಚೀನಾ ಮಾಡಿದ ತಪ್ಪು. ಇಡೀ ವಿಶ್ವಕ್ಕೆ ಕೊರೋನಾ ಹರಡಿದ ಆ ರಾಷ್ಟ್ರ ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂದು ಹೇಳಿದ್ದಾರೆ.
ಇದೇ ವೇಳೆ ತಮಗೆ ಕೊರೋನಾ ವೈರಸ್ ಸೋಂಕು ತಗಲಿದ್ದು, ದೇವರ ಆಶೀರ್ವಾದ ಎಂದಿರುವ ಅವರು, ರೋಗಕ್ಕೆ ನೀಡುವ ಸಂಭಾವ್ಯ ಔಷಧ, ಚಿಕಿತ್ಸೆಯ ಬಗ್ಗೆ ತಮಗೆ ಈ ಮೂಲಕ ಅರಿವು ಸಿಕ್ಕಂತಾಗಿದೆ ಎಂದು ತಿಳಿಸಿದ್ದಾರೆ.
ನವೆಂಬರ್ 3 ರಂದು ಅಮೆರಿಕದಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯ ನಂತರ ಜನತೆಯನ್ನು ಹಿಂಡಿ, ಹಿಪ್ಪೆ ಮಾಡುತ್ತಿರುವ ಜಾಡ್ಯ ಕೊರೋನ ನಿಗ್ರಹಕ್ಕೆ ಲಸಿಕೆ ಲಭ್ಯವಾಗಲಿದೆ ಎಂದು ಟ್ರಂಪ್ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
PublicNext
08/10/2020 09:15 am