ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಬಳ್ಳಾಪುರ: ಆ ಒಂದು ಅಪಘಾತ ತನ್ನನ್ನೇ ಮರೆಸಿತು; ಬಸ್‌ ಚಾಲಕನಾಗಬೇಕೆಂದವ ಬೀದಿ ಸಂಚಾರಿಯಾದ!

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿಲಿ ಹೃದಯ ಹಿಂಡೋ ಘಟನೆ ವೈರಲ್ ಆಗ್ತಿದೆ. ಬಸ್ ಸ್ಟೇರಿಂಗ್ ಹಿಡಿದು ಸರ್ವೆ ಮಾಡುತ್ತಿರುವಂತೆ ಕಾಣ್ತಿರುವ ಈತನ ಹೆಸರು ಮಂಜುನಾಥ್. ಖಾಸಗಿ ಬಸ್‌ ನಲ್ಲಿ ಕ್ಲೀನರ್ ಆಗಿದ್ದವ. ಮುಂದೆ ಅದೇ ಬಸ್‍ನ ಚಾಲಕನಾಗಬೇಕೆಂಬ ಆಸೆಯಿಂದಿದ್ದ. ಆದರೆ, ಆ ಒಂದು ದುರಂತ ಆತನ ಜೀವನದ ದಿಕ್ಕನ್ನೇ ಬದಲಾಯಿಸಿಬಿಟ್ಟಿತು!.

ಮಂಜುನಾಥ್, ಗಡಿನಾಡು ಚಿಂತಾಮಣಿಯಿಂದ ಆಂಧ್ರದ ಮುರುಗಮಲ್ಲ ರೂಟ್ ನ ಖಾಸಗಿ ಬಸ್ ಕ್ಲೀನರ್. ಅದೇ ಬಸ್‍ನ ಚಾಲಕನಾಗಬೇಕೆಂಬ ಎಂಬ ಮಹಾದಾಸೆ ಹೊತ್ತಿದ್ದ. ಆದರೆ, ಅಪಘಾತದಲ್ಲಿ ಗಾಯಗೊಂಡು ಮಾನಸಿಕ ಅಸ್ವಸ್ಥತೆಗೆ ತುತ್ತಾದ. ಈಗಲೂ ತಾನು ಬಸ್ ಚಾಲಕ ಎಂಬಂತೆ ಪ್ರತಿದಿನ ಬಸ್‍ನ ಸ್ಟೇರಿಂಗ್ & ವ್ಹೀಲ್‍ಗೆ ಪೂಜೆ ಮಾಡಿ, ಹೂವಿನಹಾರ ಹಾಕಿ ಚಿಂತಾಮಣಿ ನಗರದಲ್ಲಿ ವಿಚಿತ್ರವಾಗಿ ವರ್ತಿಸುತ್ತಾ ಬಸ್ ಡ್ರೈವಿಂಗ್ ಮಾಡುವವನಂತೆ ಓಡಾಡುತ್ತಿದ್ದಾನೆ, ಪಾಪ!

ಮೇಲ್ನೋಟಕ್ಕೆ ಮಂಜುನಾಥ್ ನ‌ ನೋಡಿದರೆ ಯಾರೋ ಸರ್ವೇಯವ್ರು ಅಂತ ಭಾಸವಾಗ್ತದೆ. ಹತ್ತಿರದಿಂದ ನೋಡಿದರೆ ಮನಸ್ಸು ಕರಗುತ್ತೆ. ನೋಡಲು ಆರೋಗ್ಯವಾಗಿರೋ ಯುವಕ ಖಾಕಿ ಶರ್ಟ್ ಧರಿಸಿ, ಹೂ ಇಟ್ಟು ಪೂಜೆ ಮಾಡಿ ಬಸ್ ಚಾಲನೆ ಮಾಡೋ ರೀತಿ ರಸ್ತೆಗಳಲ್ಲಿ ಓಡಾಡ್ತಿರ್ತಾನೆ!

ಬಸ್‍ನ ಸ್ಟೇರಿಂಗ್, ವ್ಹೀಲ್‍ ಗೆ ಮಿರರ್, ಹಾರ್ನ್ ಅಳವಡಿಸಿದ್ದಾನೆ. ಮಿರರ್ ಮೇಲೆ ಚಿಂತಾಮಣಿ-ಮುರಗಮಲ್ಲ-ಬೆಂಗಳೂರು ಮಾರ್ಗದ ಜಿ.ಆರ್. ಟ್ರಾವೆಲ್ಸ್ ಎಂದು ಹೆಸರು ಹಾಕಿಸಿದ್ದಾನೆ. ಗೇರ್ ಬದಲಿಸೋದು, ನಿಲ್ದಾಣಗಳ ಬಳಿ ಬಂದು ಬ್ರೇಕ್ ಹಾಕಿ ಬಸ್ ನಿಲ್ಲಿಸೋದು, ಪ್ರಯಾಣಿಕರನ್ನ ಹತ್ತಿರಿ, ಇಳಿಯಿರಿ...ಜೋಪಾನ ಎಂದೂ ಕೇಳಿಕೊಳ್ಳುತ್ತಾನೆ.

Edited By : Manjunath H D
PublicNext

PublicNext

24/03/2022 09:29 pm

Cinque Terre

80.48 K

Cinque Terre

17