ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು: ಗರಿಕೆ ಹಿರಿಮೆ; ಕಣ್ಣೊಳಗೆ ಆಡಿಸಿದರೆ ಕಲ್ಲು, ಮಣ್ಣು ಹೊರಕ್ಕೆ!

ತುಮಕೂರು: 'ಕಣ್ಣು' ಪ್ರತಿ ಜೀವಿಯ ಬಹು ಮುಖ್ಯ ಅಂಗವೆಂಬುದು ನಮಗೆಲ್ಲರಿಗೂ ಗೊತ್ತು. ಕಣ್ಣು ಕಾಣದಿದ್ದರೆ ಬರೀ ಕತ್ತಲು, ಜಗವಿಡೀ ಕಗ್ಗತ್ತಲು. ನಯನ ಶೂನ್ಯ ಬಾಳ ಬಂಡಿ ಎಳೆಯಲು ಇನ್ನೊಬ್ಬರ ಆಸರೆ, ಸಹಾಯ ಬೇಕೇ ಬೇಕು. ತನು- ಮನದಲ್ಲಿ ನಿರಂತರ ನಿರಾಸಕ್ತಿ, ನಿರಾಶಾಭಾವ. ಒಟ್ಟಾರೆ ಜೀವನ ಯಾನದಲ್ಲಿ ನೇತ್ರದ ಪಾತ್ರ ಮಹತ್ತರ ಎತ್ತರೆತ್ತರ...

ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ವೀಡಿಯೋದಲ್ಲಿ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಶ್ರೀ ಕ್ಷೇತ್ರ ಎಡೆಯೂರ್ ಸಿದ್ಧಲಿಂಗೇಶ್ವರ ಸ್ವಾಮಿ ದೇವಸ್ಥಾನದ ರಸ್ತೆ ಬದಿ ಸಾರ್ವಜನಿಕರ ಕಣ್ಣಿನ ಸ್ವಚ್ಛತೆಯ ಸೂಕ್ಷ್ಮ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ ಕಾಳಮ್ಮ ಎಂಬ ಮಹಿಳೆ.

ಅಚ್ಚರಿಯಾದರೂ ಸತ್ಯ ಸಂಗತಿಯಿದು. ಕಣ್ಣಿನೊಳಗೆ ಬಿದ್ದು, ಅಲ್ಲಿಯೇ ಹಲವು ಸಮಯದವರೆಗೂ ಠಿಕಾಣಿ ಹೂಡಿ, ಕಿರಿಕಿರಿ ಉಂಟು ಮಾಡುವ ಪುಡಿ ಪುಡಿ ಕಲ್ಲು, ಮಣ್ಣು, ಕಸವನ್ನು ಕೇವಲ ಗರಿಕೆ ಹುಲ್ಲಿನ ನೆರವಿನಿಂದ ಬಲು ಸುಲಭ- ಸರಳವಾಗಿಯೇ ಹೊರ ತೆಗೆಯುತ್ತಾರೆ ಈ 'ಜಾದೂಗಾರ್ತಿ!'

- ಮನೋಜ್ ಕೆ.ಬೆಂಗ್ರೆ, ಪಬ್ಲಿಕ್ ನೆಕ್ಸ್ಟ್

Edited By : Manjunath H D
PublicNext

PublicNext

29/08/2021 12:02 pm

Cinque Terre

100.34 K

Cinque Terre

7

ಸಂಬಂಧಿತ ಸುದ್ದಿ