ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೈದರಾಬಾದ್ನಲ್ಲಿ 10 ರೂಪಾಯಿ ಡಾಕ್ಟರ್..!

ಹೈದರಾಬಾದ್: ಯುವ ವೈದ್ಯೆಯೊಬ್ಬರು ಕೇವಲ 10 ರೂಪಾಯಿ ಫೀಸ್ ಪಡೆದು ಚಿಕಿತ್ಸೆ ನೀಡುತ್ತಿದ್ದಾರೆ‌. ಈ ಮೂಲಕ ಬಡ ರೋಗಿಗಳ ಅರೋಗ್ಯದ ಆಶಾಕಿರಣವಾಗಿದ್ದಾರೆ.

ಈಗಿನ ದುಬಾರಿ ದಿನಗಳಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳಿಗೆ ಹೋಗಿ ಚಿಕಿತ್ಸೆ ಪಡೆಯೋದು ಬಡವರಿಗೆ ಕೈಗೆಟುಕುವ ಮಾತಲ್ಲ‌‌. ಅಲ್ಲಿ ಹಗಲು ವಸೂಲಿ ನಡೆಯುತ್ತದೆ. ಈ ಮಟ್ಟಿಗಿನ ವೈದ್ಯಕೀಯ ಮಾಫಿಯಾ ನಡುವೆ ಆಂಧ್ರ ಮೂಲದ ಯುವ ವೈದ್ಯೆ ಡಾ. ನೂರ್ ಪರ್ವೀನಾ ಮನುಕುಲ ಸೇವೆಯಲ್ಲಿ ತೊಡಗಿದ್ದಾರೆ.

ಆಂಧ್ರದ ಕಡಪಾ ಮೂಲದ ವೈದ್ಯಕೀಯ ಕಾಲೇಜಿನಿಂದ ಎಂ ಬಿ ಬಿ ಎಸ್ ಪದವಿ ಪಡೆದ ಇವರು ಪ್ರತಿ ರೋಗಿಯ ಆರೋಗ್ಯ ತಪಾಸಣೆಗೆ ಕೇವಲ 10ರೂಪಾಯಿ ಫೀಸ್ ಪಡೆದು ಉತ್ತಮ ಚಿಕಿತ್ಸೆ ನೀಡುತ್ತಿದ್ದಾರೆ‌. ಇದು ಅವರ ಬಹು ದಿನಗಳ ಕನಸಾಗಿತ್ತು ಎಂದು ಅವರೇ ಹೇಳುತ್ತಾರೆ. ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ನಾನು ಆರ್ಥಿಕವಾಗಿ ಹಿಂದುಳಿದವರ ಕಷ್ಟ ಅರಿತುಕೊಂಡಿದ್ದೇನೆ. ನನ್ನ ಈ ಸೇವೆಗೆ ಕುಟುಂಬಸ್ಥರ ಸಂಪೂರ್ಣ ಸಹಕಾರವಿದೆ ಎಂದು ಡಾ. ನೂರ್ ಪರ್ವೀನಾ ತಿಳಿಸಿದ್ದಾರೆ.

Edited By : Nagaraj Tulugeri
PublicNext

PublicNext

20/12/2020 12:52 pm

Cinque Terre

110.15 K

Cinque Terre

68