ಬೆಂಗಳೂರು: ರಾಜಧಾನಿ ಬೆಂಗಳೂರಿನ ಜಟ್ಕಾ ಕಟ್ ಮಾಂಸ ಮಳಿಗೆಗಳಿಗೆ ಬಿಬಿಎಂಪಿ ಶಾಕ್ ಕೊಟ್ಟಿದೆ. ಪರವಾನಗಿ ಇಲ್ಲದೇ ಮಳಿಗೆ ತೆರೆಯಲಾಗಿದೆ ಎಂದು ಎಲ್ಲ ಮಾರ್ಟ್‌ಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಮತ್ತು ಪರವಾನಗಿ ಪಡೆಯಲು ಒಂದು ವಾರದ ಗಡವು ನೀಡಲಾಗಿದೆ. ಈ ಅವಧಿಯಲ್ಲಿ ಲೈಸನ್ಸ್ ಪಡೆಯದಿದ್ದಲ್ಲಿ ಉಲ್ಲಾಳದ ಹಿಂದವೀ ಮಾರ್ಟ್ ಮುಚ್ಚಲಾಗುವುದು ಎಂದು ಮಾಲೀಕನಿಗೆ ರಾಜರಾಜೇಶ್ವರಿ ವಲಯ ಕಚೇರಿಯಿಂದ ನೋಟೀಸ್ ಜಾರಿ ಮಾಡಲಾಗಿದೆ.
ನಿಯಮಗಳ ಪ್ರಕಾರ ಕೇವಲ ಚಿಕನ್ ಮಳಿಗೆಯಾದರೆ ಪರವಾನಗಿ ಶುಲ್ಕ ₹2500 ಇದೆ. ಹಾಗೂ ಮಟನ್ ಮಳಿಗೆಯಾಗಿದ್ದಲ್ಲಿ ₹10,500 ಶುಲ್ಕ ಪಾವತಿಸಬೇಕಿದೆ. ಮೊದಲ ಸಲ ಅನುಮತಿ ಪಡೆಯಲು ಇದೇ ಶುಲ್ಕ ಅನ್ವಯ ಆಗಲಿದೆ.
ಇನ್ನು ನೋಟೀಸ್ ಜಾರಿ ಮಾಡಲು ಬಿಬಿಎಂಪಿ ನೀಡಿರುವ ಹಲವು ಕಾರಣಗಳು ಕೆಳಗಿನಂತಿವೆ
-ಪಾಲಿಕೆಯಿಂದ ಪರವಾನಗಿ ಪಡೆದಿಲ್ಲ
-ಸಿಬ್ಬಂದಿಯ ವಾರ್ಷಿಕ ಆರೋಗ್ಯ ತಪಾಸಣೆ ಪತ್ರ ಒದಗಿಸಿಲ್ಲ
-ಮಾಂಸ, ಕೋಳಿ ಮಾರಾಟ ಮಳಿಗೆಯಲ್ಲಿ ಗಾಳಿ ಬೆಳಕು, ಶುದ್ಧ ನೀರಿನ ವ್ಯವಸ್ಥೆ ಇಲ್ಲ.
-ಕೀಟ ನಿರೋಧಕ ಟ್ರ್ಯಾಪ್ ಬಳಕೆ ಮಾಡುತ್ತಿಲ್ಲ
- ಮಾರಾಟದ ಮಳಿಗೆಯಲ್ಲಿಯೇ ಪ್ರಾಣಿ ವಧೆ ಮಾಡುತ್ತಿರುವುದು
-ಮಾರಾಟದ ಪ್ಯಾಕ್ ಮೇಲೆ ಪಾಲಿಕೆ ಅಧಿಕೃತ ಮಾರ್ಕ್ ಇರುವುದಿಲ್ಲ.
-ಘನತ್ಯಾಜ್ಯ ಸೂಕ್ತ ವಿಲೇವಾರಿ ಮಾಡ್ತಾ ಇಲ್ಲ.
PublicNext
19/04/2022 10:33 am