ನವದೆಹಲಿ: ಇನ್ಮುಂದೆ ಕೇಂದ್ರ ಸರ್ಕಾರದ ಎಲ್ಲ ನೌಕರರಿಗೆ ಪ್ರತಿನಿತ್ಯದ ಕರ್ತವ್ಯದ ಅವಧಿಯಲ್ಲಿ 5 ನಿಮಿಷಗಳ ಕಾಲ ಯೋಗ ಬ್ರೇಕ್ ನೀಡಲಾಗುತ್ತಿದೆ. ಇದಕ್ಕಾಗಿ ವೈ-ಬ್ರೇಕ್ ಆ್ಯಪ್‌ಅನ್ನು ಡೌನ್ಲೋಡ್ ಮಾಡುವಂತೆ ನೌಕರರಿಗೆ ಸೂಚಿಸಲಾಗಿದೆ. ಈಗ ಕೆಲಸದ ಸಮಯದಲ್ಲಿ ಸಿಬ್ಬಂದಿಯನ್ನು ರಿಫ್ರೆಶ್ ಮಾಡಲು ಸರ್ಕಾರ ಬಯಸಿದೆ. ಯೋಗದ ವಿಧಾನಗಳು ಮತ್ತು ಪ್ರಯೋಜನಗಳನ್ನ ಈ ಆಪ್‌ನಲ್ಲಿ ತಿಳಿಸಲಾಗಿದೆ. ಇನ್ನು ಈ ಆಪ್ʼನ್ನ ಆಯುಷ್ ಸಚಿವಾಲಯ ಅಭಿವೃದ್ಧಿಪಡಿಸಿದೆ. ಈ ಆದೇಶವನ್ನು ಸರ್ಕಾರ ಸೆಪ್ಟೆಂಬರ್ 2 ರಂದು ಹೊರಡಿಸಿದೆ.
ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಎರಡು ದಿನಗಳ ಹಿಂದೆ ಹೊರಡಿಸಿದ ಆದೇಶದಲ್ಲಿ, ಈ ಆಪ್ ಅನ್ನು ಪ್ರಚಾರ ಮಾಡಲು ಎಲ್ಲಾ ಸಚಿವಾಲಯಗಳನ್ನ ಕೇಳಿದೆ. ಆದೇಶವು, ‘ಭಾರತ ಸರ್ಕಾರದ ಎಲ್ಲಾ ಸಚಿವಾಲಯಗಳು ಮತ್ತು ಇಲಾಖೆಗಳು ವೈ-ಬ್ರೇಕ್ ಆಪ್ ಬಳಕೆಯನ್ನ ಉತ್ತೇಜಿಸಲು ವಿನಂತಿಸಲಾಗಿದೆ.’ ಡಿಒಪಿಟಿ, ಸೆಪ್ಟೆಂಬರ್ 2 ರಂದು ಹೊರಡಿಸಿದ ಆದೇಶದಲ್ಲಿ, ಆಂಡ್ರಾಯ್ಡ್ ಆಧಾರಿತ ವೈ-ಬ್ರೇಕ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು ಎಂದು ಹೇಳಿದೆ.
PublicNext
05/09/2021 12:42 pm