ಮುಂಬೈ: ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳಿಂದಾಗಿ ಸೋಮವಾರದಿಂದ ರಾಜ್ಯದಲ್ಲಿ ರಾಜಕೀಯ, ಧಾರ್ಮಿಕ ಮತ್ತು ಸಾಮಾಜಿಕ ಸಭೆ- ಸಮಾರಂಭಗಳ ಮೇಲೆ ನಿರ್ಬಂಧ ಹೇರಲಾಗಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಭಾನುವಾರ ಪ್ರಕಟಿಸಿದ್ದಾರೆ.
ಕೋವಿಡ್-19 ಸೋಂಕು ಮಹಾರಾಷ್ಟ್ರದಲ್ಲಿ ಮತ್ತೆ ತಲೆ ಎತ್ತುತ್ತಿದೆ. ಇದು ಕೊರೊನಾ ರೂಪಾಂತರವಾಗಿದ್ದರೆ 8ರಿಂದ 15 ದಿನಗಳಲ್ಲಿ ನಮಗೆ ತಿಳಿಯುತ್ತದೆ. ಪರಿಸ್ಥಿತಿ ಹದಗೆಟ್ಟರೆ ನಾವು ಲಾಕ್‌ಡೌನ್ ವಿಧಿಸಬೇಕಾಗಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
PublicNext
21/02/2021 09:35 pm