ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೇರಳ ಆಯ್ತು ಈಗ ಮಹಾರಾಷ್ಟ್ರದಿಂದ ಬರುವವರಿಗೂ ಪ್ರತ್ಯೇಕ ಮಾರ್ಗಸೂಚಿ ಪ್ರಕಟ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಆತಂಕ ಹೆಚ್ಚಾಗಿದೆ. ಹೀಗಾಗಿ ಈಗಾಗಲೇ ಕೇರಳದಿಂದ ಬರುವವರಿಗೆ ಮಾರ್ಗಸೂಚಿ ಪ್ರಕಟಿಸಿದ್ದ ರಾಜ್ಯ ಸರ್ಕಾರ ಈಗ ಮಹಾರಾಷ್ಟ್ರದಿಂದ ಆಗಮಿಸುವ ಪ್ರಯಾಣಿಕರಿಗೆ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಿದೆ.

ದೇಶದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಪೈಕಿ ಕೇರಳ, ಮಹಾರಾಷ್ಟ್ರದಲ್ಲಿ ಶೇಕಡಾ 75ರಷ್ಟು ಪ್ರಕರಣಗಳು ಪತ್ತೆಯಾಗಿವೆ. ಅಷ್ಟೇ ಅಲ್ಲದೆ ಮಹಾರಾಷ್ಟ್ರ, ಕೇರಳದಲ್ಲಿ ಅಪಾಯಕಾರಿ ಬ್ರಿಟನ್ ವೈರಸ್ ಎಫ್484ಕೆ ಅತ್ಯಂತ ವೇಗವಾಗಿ ವ್ಯಾಪಿಸ್ತಿದೆ ಎಂದು ಸಿಸಿಎಂಬಿ ಕಳವಳ ವ್ಯಕ್ತಪಡಿಸಿದೆ. ಈ ಬೆಳವಣಿಗೆ ಕರ್ನಾಟಕಕ್ಕೂ ಆತಂಕ ತಂದಿದೆ. ಹೀಗಾಗಿ ಮಹಾರಾಷ್ಟ್ರದಿಂದ ರಾಜ್ಯ ಆಗಮಿಸುವವರು ಈ ಕೆಳಕಂಡ ಮಾರ್ಗಸೂಚಿ ಅನುಸರಿಸಬೇಕು.

* ಕರ್ನಾಟಕ ಎಂಟ್ರಿಗೆ ಕೋವಿಡ್ ನೆಗೆಟೀವ್ ಸರ್ಟಿಫಿಕೇಟ್ ಕಡ್ಡಾಯ.

* ವಿಮಾನ ಪ್ರಯಾಣಿಕರು ಆರ್ ಟಿಪಿಸಿಆರ್ ಟೆಸ್ಟ್ ಮಾಡಿಸಿಕೊಂಡು ಬರುವುದು ಕಡ್ಡಾಯ.

* ಮಹಾರಾಷ್ಟ್ರದ ಪ್ರಯಾಣಿಕರ ಬಳಿ ಕೋವಿಡ್ ರಿಪೋರ್ಟ್ ಇದ್ದಲ್ಲಿ ಮಾತ್ರ ಬಸ್ ಟಿಕೆಟ್.

* ಆನ್‍ಲೈನ್‍ನಲ್ಲಿ ಟಿಕೆಟ್ ಬುಕ್ ಮಾಡಿದ್ರೆ, ರಿಪೋರ್ಟ್ ನೋಡಿ ಬಸ್ ಹತ್ತಿಸಬೇಕು.

* ರೈಲು ಪ್ರಯಾಣಿಕರ ಬಳಿ ನೆಗೆಟೀವ್ ರಿಪೋರ್ಟ್ ಇದ್ದಲ್ಲಿ ಮಾತ್ರ ಪ್ರಯಾಣಕ್ಕೆ ಅವಕಾಶ.

* ಸ್ವಂತ/ಬಾಡಿಗೆ ವಾಹನಗಳಲ್ಲಿ ಬರುವವರಿಗೆ ಟೋಲ್‍ಗೇಟ್‍ಗಳಲ್ಲಿ ರ‍್ಯಾಂಡಮ್ ಚೆಕ್‍ಅಪ್ ಕಡ್ಡಾಯ..

* ಹೋಟೆಲ್, ಶಿಕ್ಷಣ ಸಂಸ್ಥೆಗಳಲ್ಲಿ 5ಕ್ಕೂ ಹೆಚ್ಚು ಕೇಸ್ ಬಂದ್ರೆ, ಕಂಟೈನ್ಮೆಂಟ್ ಝೋನ್ ಎಂದು ಪರಿಗಣನೆ

* ಮಹಾರಾಷ್ಟ್ರದಿಂದ ಬಂದವರಿಗೆ ಕೋವಿಡ್ ರಿಪೋರ್ಟ್ ಇದ್ದರಷ್ಟೇ, ಹೋಟೆಲ್, ಲಾಡ್ಜ್ ಗಳಲ್ಲಿ ರೂಂ.

* 2 ವಾರಗಳಲ್ಲಿ ಮಹಾರಾಷ್ಟ್ರದಿಂದ ಬಂದಿರುವ ವಿದ್ಯಾರ್ಥಿಗಳು, ಉದ್ಯಮಿಗಳು ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಬೇಕು.

Edited By : Vijay Kumar
PublicNext

PublicNext

20/02/2021 07:20 pm

Cinque Terre

78.79 K

Cinque Terre

0

ಸಂಬಂಧಿತ ಸುದ್ದಿ