ವಿಜಯವಾಡ: ಕೊರೊನಾ ಲಸಿಕೆ ಪಡೆದುಕೊಂಡ ಬಳಿಕ ಮೃತಪಟ್ಟ ಸ್ವಯಂ ಸೇವಕಿಯ ಕುಟುಂಬಕ್ಕೆ ಆಂಧ್ರ ಪ್ರದೇಶದ ಜಗನ್ ಮೋಹನ್ ರೆಡ್ಡಿ ಸರ್ಕಾರವು ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 50 ಲಕ್ಷ ರೂಪಾಯಿ ಪರಿಹಾರ ನೀಡಿದೆ.
ಆಂಧ್ರ ಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಪಲಾಸಾ ಮಂಡಲದ ನಿವಾಸಿ ಲಲಿತಾ (28) ಮೃತ ಸ್ವಯಂ ಸೇವಕಿ. ಲಲಿತಾ ಅವರಿಗೆ ಮದುವೆಯಾಗಿ ಓರ್ವ ಗಂಡು ಮಗನಿದ್ದಾನೆ.
ಲಲಿತಾ ಸೇರಿದಂತೆ ಎಂಟು ಮಂದಿ ಭಾನುವಾರ ಕೊರೊನಾ ಲಸಿಕೆ ಪಡೆದಿದ್ದರು. ಲಸಿಕೆ ಪಡೆದ ಬಳಿಕ ಎಲ್ಲರಿಗೂ ತಲೆ ನೋವು ಮತ್ತು ಜ್ವರದಂತಹ ರೋಗ ಲಕ್ಷಣಗಳು ಕಾಣಿಸಿಕೊಂಡಿತ್ತು. ಆದರೆ ಲಲಿತಾ ಪರಿಸ್ಥತಿ ಮಾತ್ರ ತುಂಬಾ ಗಂಭೀರವಾಗಿ ಮೃತಪಟ್ಟಿದ್ದಾರೆ.
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಆಕೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇತ್ತ ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಚಿವ ಡಾ.ಸಿದಿರಿ ಅಪ್ಪಲರಾಜು ಆಸ್ಪತ್ರೆಗೆ ಭೇಟಿ ನೀಡಿ ಲಲಿತಾ ಕುಟುಂಬಕ್ಕೆ ಸಾಂತ್ವನ ಹೇಳಿ ಸರ್ಕಾರದಿಂದ ಹಣದ ನೆರವು ನೀಡುವುದಾಗಿಯು ಭರವಸೆ ನೀಡಿದ್ದರು.
PublicNext
11/02/2021 06:23 pm