ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಕ್ಕಿ ಜ್ವರ ಭೀತಿ: ದೆಹಲಿಗೆ ಹೊರಗಿನಿಂದ ಕೋಳಿ ಮಾಂಸ ತರುವಂತೆ ಇಲ್ಲ!

ನವದೆಹಲಿ: ದೇಶಾದ್ಯಂತ ಹಕ್ಕಿಜ್ವರ ಆತಂಕ ಸೃಷ್ಟಿಸಿದ್ದು, ಈ ನಿಟ್ಟಿನಲ್ಲಿ ದೆಹಲಿ ಸರ್ಕಾರ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.

ಈ ಸಂಬಂಧ ಆದೇಶ ಹೊರಡಿಸಿರು ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ದೆಹಲಿಗೆ ಹೊರಗಿನಿಂದ ಸಂಸ್ಕರಿಸಿದ ಮಾಂಸ ಬರುವುದಕ್ಕೆ ತಡೆ ಹೇರಲಾಗಿದೆ. ಹಕ್ಕಿ ಜ್ವರಕ್ಕೆ ಸಂಬಂಧಿಸಿ ಸಾರ್ವಜನಿಕರು ಗೊಂದಲಕ್ಕೆ ಸಿಲುಕಬಾರದು. ಸರ್ಕಾರ ಸಕಲ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದ್ದು ಜನರ ಹಿತ ಕಾಪಾಡಲು ಬದ್ಧರಾಗಿದ್ದೇವೆ ಎಂದು ಹೇಳಿದ್ದಾರೆ.

ದೇಶದ ಎಂಟು ರಾಜ್ಯಗಳಲ್ಲಿ ಈಗಾಗಲೇ ಹಕ್ಕಿ ಜ್ವರದ ಪ್ರಕರಣ ದಾಖಲಾಗಿವೆ. ಉತ್ತರ ಪ್ರದೇಶ, ಕೇರಳ, ರಾಜಸ್ಥಾನ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ಹರಿಯಾಣ, ಗುಜರಾತ್‌ನಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿತ್ತು. ಇದೀಗ ದೆಹಲಿಯಲ್ಲಿಯೂ ಪ್ರಕರಣ ವರದಿಯಾದ ನಂತರ ಸರ್ಕಾರ ಸಕಲ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದೆ.

ದೆಹಲಿಯ ಸಂಜಯ್‌ ಸರೋವರದಲ್ಲಿ 10 ಬಾತುಕೋಳಿ ಮೃತಪಟ್ಟಿದ್ದವು. ಇತ್ತ ಮಯೂರ್ ವಿಹಾರದ ಮೂರನೇ ಹಂತದಲ್ಲಿ 50 ಕಾಗೆಗಳು ಸಾವನ್ನಪ್ಪಿದ್ದವು. ಇದರಿಂದಾಗಿ ಈ ಪಕ್ಷಿಗಳ ಸಾವಿಗೆ ಕಾರಣವನ್ನು ಪತ್ತೆ ಹಚ್ಚಲು ಮೂರು ಬಾತುಕೋಳಿಯ ಮಾದರಿ, ನಾಲ್ಕು ಕಾಗೆಗಳ ಮಾದರಿ ಸೇರಿದಂತೆ ದ್ವಾರಕದಲ್ಲಿ ಮೃತಪಟ್ಟಿದ್ದ ಒಂದು ಕಾಗೆಯ ಮಾದರಿಯನ್ನು ಭೋಪಾಲ್‌ ಮೂಲದ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು.

‘ಭೋಪಾಲ್‌ನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದ 8 ಮಾದರಿಗಳಲ್ಲೂ ‘ಹಕ್ಕಿ ಜ್ವರ’ ದೃಢಪಟ್ಟಿದೆ. ಕೆಲವು ಮಾದರಿಗಳನ್ನು ಜಲಂಧರ್‌ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಅವುಗಳ ವರದಿ ಇನ್ನೂ ಬರಬೇಕಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Edited By : Vijay Kumar
PublicNext

PublicNext

11/01/2021 05:48 pm

Cinque Terre

43 K

Cinque Terre

1

ಸಂಬಂಧಿತ ಸುದ್ದಿ