ಬೆಂಗಳೂರು : ಇಂಗ್ಲೆಂಡ್ ನ ರೂಪಾಂತರಗೊಂಡ ಕೊರೊನಾ ವೈರಸ್ ಭಾರತಕ್ಕೂ ಎಂಟ್ರಿ ಕೊಟ್ಟಿದ್ದು ಈಗಾಗಲೇ 20 ಜನರಲ್ಲಿ ಸೋಂಕು ಪತ್ತೆಯಾಗಿದೆ.
ಈ ಡೆಡ್ಲಿ ಸೋಂಕು ತಡೆಗಟ್ಟು ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಮಹತ್ವದ ತೀರ್ಮಾನಗಳ ಕುರಿತು ನಾಳೆ ಸಿಎಂ ಯಡಿಯೂರಪ್ಪ ಮಹತ್ವದ ಸುದ್ದಿಗೋಷ್ಠಿ ನಡೆಸಲಿದ್ದಾರೆ.
ರೂಪಾಂತರ ವೈರಸ್ ಸೋಂಕಿನ ಭೀತಿಯ ಹಿನ್ನಲೆಯಲ್ಲಿ ಮತ್ತೆ ರಾಜ್ಯದಲ್ಲಿ ಲಾಕ್ ಡೌನ್, ಸೀಲ್ ಡೌನ್ ನಂತಹ ಕಠಿಣ ರೂಲ್ಸ್ ಜಾರಿಗೆ ತರಲಿದ್ದಾರಾ ಎಂಬ ಕುತೂಹಲ ಹೆಚ್ಚಾಗಿದೆ.
ಬೆಂಗಳೂರಿನಲ್ಲಿ 7 ಜನರಿಗೆ ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ನಾಲ್ವರಿಗೆ ಸೇರಿದಂತೆ ರಾಜ್ಯದಲ್ಲಿ ಒಟ್ಟು 11 ಜನರಿಗೆ ಬ್ರಿಟನ್ ರೂಪಾಂತರಿ ವೈರಸ್ ಶಾಕ್ ನೀಡಿದೆ.
ಸೋಂಕು ಪತ್ತೆಯಾದ ಸ್ಥಳಗಳಲ್ಲಿ ಈಗಾಗಲೇ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.
ರಾಜ್ಯದಲ್ಲಿ ರೂಪಾಂತರ ವೈರಸ್ ನಿಯಂತ್ರಣಕ್ಕಾಗಿ ಲಾಕ್ ಡೌನ್, ಸೀಲ್ ಡೌನ್ ಹಾಗೂ ಕರ್ಫ್ಯೂ ನಂತರ ಟಫ್ ರೂಲ್ಸ್ ಜಾರಿಯಾದ್ರು ಅಚ್ಚರಿಯಿಲ್ಲ.
PublicNext
30/12/2020 12:54 pm