ವಾಷಿಂಗ್ಟನ್: 3 ಕೋವಿಡ್ ಅಲೆಗಳ ಮಧ್ಯೆಯೂ ಭಾರತದ ಆರ್ಥಿಕತೆ ಪುಟಿದೆದ್ದಿದೆ ಇದು ಗಮನಾರ್ಹ ಸಂಗತಿ ಎಂದು ಅಮೆರಿಕದ ಹಣಕಾಸು ಸಚಿವಾಲಯ ಪ್ರಶಂಸೆ ವ್ಯಕ್ತಪಡಿಸಿದೆ.
2021ರ ಮಧ್ಯಭಾಗದಲ್ಲಿ ಭಾರತವನ್ನು ಬಹುವಾಗಿ ಕಾಡಿದ ಕೋವಿಡ್ 2ನೇ ಅಲೆಯು, ದೇಶದ ಆರ್ಥಿಕತೆ ಚೇತರಿಕೆಯನ್ನು ಸ್ವಲ್ಪ ವಿಳಂಬ ಮಾಡಿತು ಎಂದು ಹಣಕಾಸು ಸಚಿವಾಲಯದ ಅರ್ಧ ವಾರ್ಷಿಕ ವರದಿ ಹೇಳಿದೆ.
'ಎರಡನೇ ಅಲೆಯ ಮಾರಕ ಪರಿಣಾಮಗಳ ಹೊರತಾಗಿಯೂ, ಹಣಕಾಸು ವರ್ಷದ ಎರಡನೇ ಭಾಗದಲ್ಲಿ ದೇಶದಲ್ಲಿ ಲಸಿಕಾ ಅಭಿಯಾನವನ್ನು ಚುರುಕುಗೊಳಿಸಿದ ಪರಿಣಾಮ ಆರ್ಥಿಕ ಚಟುವಟಿಕೆಗಳು ಪ್ರಬಲವಾಗಿಯೇ ಪುಟಿದೆದ್ದವು. 2020ರಲ್ಲಿ ದೇಶದ ಆರ್ಥಿಕತೆ ಶೇ. ಮೈನಸ್ 7ಕ್ಕೆ ಕುಸಿದಿದ್ದು, 2021ರ ದ್ವಿತಿಯಾರ್ಧದಲ್ಲಿ ಆರ್ಥಿಕತೆಯ, ಕೋವಿಡ್ ಪೂರ್ವ ಸ್ಥಿತಿ ತಲುಪಿತು. ಜೊತೆಗೆ 2021ರಲ್ಲಿ ಒಟ್ಟಾರೆ ಬೆಳವಣಿಗೆ ಪ್ರಮಾಣವು ಶೇ.8ಕ್ಕೆ ಮುಟ್ಟಿತ್ತು ಎಂದು ವರದಿ ಹೇಳಿದೆ.
2022ರ ಆರಂಭದಿಂದಲೇ ಭಾರತವು, ಒಮಿಕ್ರೋನ್ ಉಪತಳಿಯಿಂದಾಗಿ 3ನೇ ಅಲೆಯ ಪ್ರಭಾವಕ್ಕೆ ಸಿಕ್ಕಿತ್ತು. ಆದರೆ ಸೋಂಕಿತರ ಸಾವು ಮತ್ತು ಆರ್ಥಿಕತೆಯ ಮೇಲೆ ವ್ಯತಿರಿಕ್ತ ಪರಿಣಾಮಗಳು ಸೀಮಿತವಾಗಿತ್ತು ಎಂದು ವರದಿ ಹೇಳಿದೆ.
PublicNext
12/06/2022 01:59 pm