ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇಂದು ಸಂಜೆ 4ಕ್ಕೆ ಸಿಎಂ ಇಂದು ಮಹತ್ವದ ಸಭೆ : ಕೋವಿಡ್ ಬಗ್ಗೆ ಮಹತ್ವದ ನಿರ್ಧಾರ

ಬೆಂಗಳೂರು : ರಾಜ್ಯದಲ್ಲಿ ಕೋವಿಡ್ ಪ್ರಮಾಣ ಹೆಚ್ಚಾಗಿದೆ. ಸಮಾಧಾನದ ಸುದ್ರಿ ಅಂದ್ರೆ ಸಾವಿನ ಪ್ರಮಾಣ ಕಡಿಮೆಯಿದೆ. ಇಂದು ಸಂಜೆ 4 ಗಂಟೆಗೆ ಕೋವಿಡ್ ಬೆಳವಣಿಗೆಯ ಬಗ್ಗೆ ಸಿಎಂ ಮಹತ್ವದ ಸಭೆ ಕರೆದಿದ್ದಾರೆ.

ಈಗಾಗಲೇ ತಾಂತ್ರಿಕ ಸಲಹಾ ಸಮಿತಿಯಿಂದ ಮಹತ್ವದ ಸಭೆ ನಡೆದಿದೆ. ಈ ಸಭೆಯಲ್ಲಿ 7 ವಿಚಾರಗಳ ಬಗ್ಗೆ ಮುಖ್ಯಸ್ಥರು ಹಾಗೂ ಸದಸ್ಯರು ಚರ್ಚಿಸಿ ಸಂಜೆಯ ಸಿಎಂ ಸಭೆಯಲ್ಲಿ ಈ ತಾಂತ್ರಿಕ ಸಲಹಾ ಸಮಿತಿ ವರದಿ ಸಲ್ಲಿಸಲಿದೆ. ವೀಕೆಂಡ್ ಕರ್ಪ್ಯೂ, ನೈಟ್ ಕರ್ಪ್ಯೂ ಟೆಸ್ಟಿಂಗ್ ಹೆಚ್ಚಳ ಕುರಿತು ಸರ್ಕಾರ ಸಲ್ಲಿಸುವ ವರದಿಯಲ್ಲಿ ಉಲ್ಲೇಖಿ ಸಲಾಗಿದೆ.

ಇನ್ನು ಸಂಜೆಯ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲು ಸಿಎಂ ಮುಂದಾಗಿದ್ದಾರೆ ಎಂದು ತಿಳಿದು ಬಂದಿದ್ದು ಎಲ್ಲರ ಚಿತ್ತ ಸಭೆಯತ್ತ ನೆಟ್ಟಿದೆ.

ರಾಜ್ಯದಲ್ಲಿ ಕಳೆದ ಎರಡು ವಾರಗಳಿಂದ ಜಾರಿಯಲ್ಲಿರುವ ವೀಕ್‌ಎಂಡ್ ಲಾಕ್‌ಡೌನ್ ವಿರುದ್ಧ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ಮಹತ್ವದ ನಿರ್ಧಾರ ಪ್ರಕಟವಾಗುವ ಸಾಧ್ಯತೆ ಇದೆ.

Edited By : Nirmala Aralikatti
PublicNext

PublicNext

17/01/2022 01:28 pm

Cinque Terre

90.26 K

Cinque Terre

7

ಸಂಬಂಧಿತ ಸುದ್ದಿ